HEALTH TIPS

ರಾಮಮಂದಿರ ಗರ್ಭಗುಡಿಯ 18 ಬಾಗಿಲುಗಳಿಗೆ ಚಿನ್ನದ ಲೇಪನ! ಅಯೋಧ್ಯೆಗೆ 1,000 ರೈಲುಗಳ ಓಡಾಟ

              ವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರದ ಗರ್ಭಗುಡಿಯ 18 ಬಾಗಿಲುಗಳು ಚಿನ್ನ ಲೇಪಿತವಾಗಿರಲಿದೆ ಎಂದು ತಿಳಿದುಬಂದಿದೆ. ಜನವರಿ ಮೊದಲ ವಾರದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೂ ಮುನ್ನವೇ ಈ ಕಾಮಗಾರಿ ಪೂರ್ಣಗೊಳ್ಳಲಿದೆ.

              ಗರ್ಭಗುಡಿಯ ಆವರಣದಲ್ಲಿ ಒಟ್ಟು 46 ಬಾಗಿಲುಗಳು ಇರಲಿವೆ. ಅದರಲ್ಲಿ ನೆಲಮಹಡಿಯ 18 ಬಾಗಿಲುಗಳಿಗೆ ಚಿನ್ನದ ಲೇಪನ ಮಾಡಲಾಗುತ್ತದೆ. ಜನವರಿ 22ರಂದು ಗರ್ಭಗುಡಿಯಲ್ಲಿ ರಾಮ ಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.

               ಎಲ್ಲ ಬಾಗಿಲುಗಳನ್ನು ಮಹಾರಾಷ್ಟ್ರದ ಚಂದ್ರಾಪುರದ ತೇಗದ ಮರದಿಂದ ಮಾಡಲಾಗಿದೆ. ಬಾಗಿಲುಗಳನ್ನು ಹೈದರಾಬಾದ್‌ನ ಕಲಾವಿದರು ಕೆತ್ತಿದ್ದಾರೆ. ನೆಲ ಮಹಡಿಯಲ್ಲಿ ಅಳವಡಿಸಲಾಗಿರುವ ಬಾಗಿಲುಗಳಿಗೆ ತಾಮ್ರದ ಸೂಕ್ಷ್ಮ ಪದರವನ್ನು ಲೇಪಿಸಿ, ನಂತರ ಚಿನ್ನದ ಲೇಪಿನ ಮಾಡಲಾಗುತ್ತದೆ.

ಈ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​​ನ ಸದಸ್ಯ ಅನಿಲ್​ ಮಿಶ್ರಾ ಮಾತನಾಡಿ, ಭಕ್ತರು ದೇವಸ್ಥಾನಕ್ಕೆ ಅರ್ಪಿಸಿದ ಚಿನ್ನವನ್ನು ಬಾಗಿಲುಗಳಿಗೆ ಬಳಸಲಾಗಿದೆ. ಬಾಗಿಲುಗಳಿಗೆ ಎಷ್ಟು ಚಿನ್ನವನ್ನು ಅನ್ವಯಿಸಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅನಿಲ್​ ಮಿಶ್ರಾ, ಅದರ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

                   ಗರ್ಭಗುಡಿಯ ಬಾಗಿಲುಗಳಿಗೆ ಚಿನ್ನದ ತಗಡುಗಳನ್ನು ಅಳವಡಿಸುವ ಜವಾಬ್ದಾರಿಯನ್ನು ಗಾಜಿಯಾಬಾದ್‌ನ ಜ್ಯುವೆಲ್ಲರ್ಸ್ ಸಂಸ್ಥೆಯೊಂದಕ್ಕೆ ನೀಡಲಾಗಿದ್ದು, ಏಳು ಬಾಗಿಲುಗಳು ಪೂರ್ಣಗೊಂಡಿದ್ದು, ಉಳಿದವುಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಅಯೋಧ್ಯೆಗೆ 1,000 ವಿಶೇಷ ರೈಲುಗಳ ಓಡಾಟ
                   ಅಯೋಧ್ಯೆಯಲ್ಲಿ ನೂತನವಾಗಿ ನಿರ್ವಿುಸಲಾಗಿರುವ ರಾಮ ಮಂದಿರ ಉದ್ಘಾಟನೆಯ ಮೊದಲ 100 ದಿನ ದೇಶದ ನಾನಾ ಭಾಗಗಳಿಂದ 1,000ಕ್ಕೂ ಅಧಿಕ ರೈಲುಗಳನ್ನು ಓಡಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ. ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯ ಒಂದು ದಿನದ ನಂತರ ಅಂದರೆ 2024ರ ಜನವರಿ 23ರಂದು ಮಂದಿರವನ್ನು ಸಾರ್ವಜನಿಕ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತದೆ. ಯಾತ್ರಿಗಳು ನಗರಕ್ಕೆ ಬಂದು ವಾಪಸ್ ಹೋಗಲು ಅನುಕೂಲವಾಗುವಂತೆ ಜನವರಿ 19ರಿಂದಲೇ ಈ ರೈಲುಗಳು ಕಾರ್ಯಾಚರಿಸಲಿವೆ. ದೆಹಲಿ, ಮುಂಬಯಿ, ಚೆನ್ನೈ, ಬೆಂಗಳೂರು, ಪುಣೆ, ಕೋಲ್ಕತಾ, ನಾಗ್ಪುರ, ಲಖನೌ ಮತ್ತು ಜಮ್ಮು ಸಹಿತ ಎಲ್ಲ ವಲಯಗಳು ಹಾಗೂ ನಾನಾ ನಗರಗಳೊಂದಿಗೆ ಈ ರೈಲುಗಳು ಅಯೋಧ್ಯೆಯನ್ನು ಸಂಪರ್ಕಿಸಲಿವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries