HEALTH TIPS

ಗೋಡೆ ಕುಸಿತ: ಇಟ್ಟಿಗೆ ಗೂಡಲ್ಲಿ ಕೆಲಸ ಮಾಡುತ್ತಿದ್ದ 6 ಕಾರ್ಮಿಕರು, ಕುದುರೆ ಸಾವು

                  ರಿದ್ವಾರ: ಇಟ್ಟಿಗೆ ಗೂಡಿನ ಗೋಡೆ ಕುಸಿದು 6 ಕಾರ್ಮಿಕರು ಮೃತಪಟ್ಟು, 4 ಮಂದಿ ಗಾಯಗೊಂಡಿರುವ ಘಟನೆ ಉತ್ತರಾಖಂಡ ರಾಜ್ಯದ ಹರಿದ್ವಾರ ಜಿಲ್ಲೆಯ ಲಾಹ್ಬೋಲಿ ಎಂಬ ಹಳ್ಳಿಯಲ್ಲಿ ನಡೆದಿದೆ. ಇಟ್ಟಿಗೆ ಗೂಡಿನಲ್ಲಿ ಕೆಲಸ ಮಾಡುತ್ತಿದ್ದಾಗ ಗೋಡೆ ಕುಸಿದಿದೆ.

               ಅವಘಡಕ್ಕೆ ಕಾರಣವಾದ ಸಂದರ್ಭದ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಎಸ್‌ಎಸ್‌ಪಿ ಪ್ರಮೇಂದ್ರ ಡೊಭಾಲ್ ತಿಳಿಸಿದ್ದಾರೆ.

                ಸ್ಥಳದಲ್ಲೇ ಐವರು ಮೃತಪಟ್ಟರೆ, ಗಾಯಾಳುಗಳನ್ನು ದಾಖಲಿಸಲಾಗಿದ್ದ ರೂರ್ಕಿ ಆಸ್ಪತ್ರೆಯಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ಎಸ್‌ಪಿ ಸ್ವಪ್ನನ್ ಕಿಶೋರ್ ಹೇಳಿದ್ದಾರೆ. ಗೋಡೆಯ ಅವಶೇಷಗಳಡಿ ಸಿಲುಕಿ ಒಂದು ಕುದುರೆ ಸಹ ಅಸುನೀಗಿದೆ. ಪ್ರಕರಣ ಸಂಬಂಧ ತನಿಖೆಗೆ ಆದೇಶಿಸಲಾಗಿದೆ.

                  ಸಾನ್ವಿ ಇಟ್ಟಿಗೆ ಗೂಡಿನಲ್ಲಿ ಅವಘಡ ಸಂಭವಿಸಿದ್ದು, ಗೋಡೆ ಕುಸಿದ ಸಂದರ್ಭ ಕಾರ್ಮಿಕರು ಇಟ್ಟಿಗೆ ತಯಾರಿಕೆಯಲ್ಲಿ ನಿರತರಾಗಿದ್ದರು. ಅರ್ತ್ ಮೂವರ್ ಯಂತ್ರದ ಮೂಲಕ ಅವಶೇಷಗಳಡಿ ಸಿಲುಕಿದ್ದ ಕಾರ್ಮಿಕರನ್ನು ಹೊರಗೆ ತರಲಾಯಿತು ಎಂದು ಎಸ್‌ಪಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries