HEALTH TIPS

ಹೊಸ ವರ್ಷವನ್ನು ಮೊದಲು & ಕೊನೆಯದಾಗಿ ಸ್ವಾಗತಿಸುವ ದೇಶ ಯಾವುದು ಗೊತ್ತಾ?

 ಹೊಸ ವರ್ಷಕ್ಕೆ ಇನ್ನೇನು ಬೆರಳೆಣಿಕೆ ದಿನ ಬಾಕಿ ಉಳಿದಿದೆ. 2023ಕ್ಕೆ ಗುಡ್ ಬೈ ಹೇಳಿ ಹೊಸ ವರ್ಷ ಸ್ವಾಗತಿಸಲು ವಿಶ್ವದಾದ್ಯಂತ ಕಾತರದಿಂದ ಕಾಯುತ್ತಿದ್ದಾರೆ. ನಾವು ಹಿಂದಿನ ವರ್ಷದ ಒಳ್ಳೆಯ ನೆನಪುಗಳು ಮತ್ತು ಕಲಿತ ಪಾಠವನ್ನು ನೆನಪಿಸಿಕೊಳ್ಳುವ ಕಾಲವಿದು. ಹೊಸ ವರ್ಷಕ್ಕೆ ಕಾಲಿಡುತ್ತಿರುವಾಗ ಕಳೆದ ವರ್ಷದಿಂದ ನಕಾರಾತ್ಮಕ ಭಾವನೆಗಳನ್ನು ತೆಗೆದುಕೊಂಡು ಅವುಗಳನ್ನು ಭರವಸೆ, ಸಂತೋಷ ಮತ್ತು ಉತ್ತಮ ನಾಳೆಯ ಭರವಸೆಗಳೊಂದಿಗೆ ಬದಲಾಯಿಸುವ ಸಮಯವಿದು.


ಹೊಸ ವರ್ಷವನ್ನು ಪ್ರಪಂಚದಾದ್ಯಂತ ವೈಭವದಿಂದ ಆಚರಿಸಲಾಗುತ್ತದೆ. ನ್ಯೂಯಾರ್ಕ್ ನಗರದಲ್ಲಿ ಬಾಲ್ ಡ್ರಾಪ್‌ನಿಂದ ಹಿಡಿದು ಭಾರತದಲ್ಲಿ ವಯಸ್ಸಾದ ವ್ಯಕ್ತಿಯ ಪ್ರತಿಕೃತಿ ದಹಿಸುವ ಮೂಲಕ ಸ್ಪೇನ್‌ನಲ್ಲಿ 12 ದ್ರಾಕ್ಷಿಗಳನ್ನು ಸೇವಿಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಲಂಡನ್‌ನಲ್ಲಿ ಗಡಿಯಾರ 12 ಗಂಟೆಗೆ 12 ಬಾರಿ ಬಾರಿಸುವ ಶಬ್ದದೊಂದಿಗೆ ಹೊಸ ವರ್ಷ ಆರಂಭ ಎಂದು ಪರಿಗಣಿಸಲಾಗಿದೆ.

ಯಾವ ದೇಶವು ಮೊದಲು ಹೊಸ ವರ್ಷವನ್ನು ಸ್ವಾಗತಿಸುತ್ತದೆ? ಪೆಸಿಫಿಕ್ ದ್ವೀಪಗಳಾದ ಟೊಂಗಾ, ಸಮೋವಾ ಮತ್ತು ಕಿರಿಬಾಟಿ ಹೊಸ ವರ್ಷವನ್ನು ಮೊದಲು ಸ್ವಾಗತಿಸುವ ದೇಶಗಳಾಗಿವೆ. ಜನವರಿ 1 ಈ ದೇಶಗಳಲ್ಲಿ ಭಾರತೀಯ ಕಾಲಾಮಾನ ಸಮಯ 3:30ಕ್ಕೆ ಪ್ರಾರಂಭವಾಗುತ್ತದೆ. ಈ ವೇಳೆ ಈ ದ್ವೀಪ ರಾಷ್ಟ್ರಗಳು ಮೊದಲು ಹೊಸ ವರ್ಷಕ್ಕೆ ಕಾಲಿಡಲಿವೆ. ಆದರೆ ಭಾರತ ಇನ್ನೂ ಗಂಟೆಗಳ ಲೆಕ್ಕದಲ್ಲಿ ಹಿಂದಿರುತ್ತದೆ.

ಯಾವ ದೇಶವು ಕೊನೆಯದಾಗಿ ಹೊಸ ವರ್ಷವನ್ನು ಸ್ವಾಗತಿಸುತ್ತದೆ? ಜನವಸತಿ ಇಲ್ಲದ ಹೌಲ್ಯಾಂಡ್ ಮತ್ತು ಬೇಕರ್ ದ್ವೀಪಗಳಲ್ಲಿ, ಜನವರಿ 1 ರಂದು ಸಂಜೆ 5:30 IST ಗೆ ಪ್ರಾರಂಭವಾಗುತ್ತದೆ. ಅವರು ಹೊಸ ವರ್ಷವನ್ನು ಸ್ವಾಗತಿಸುವ ವಿಶ್ವದ ಕೊನೆಯ ದೇಶಗಳು ಎಂದು ಗುರುತಿಸಲಾಗಿದೆ. ಈ ದೇಶಳು ಪ್ರತಿ ವರ್ಷ ಬದಲಾವಣೆಯಾಗುತ್ತದೆ. ಭೂಮಿಯ ಚಲನೆಯ ಪ್ರಕಾರವಾಗಿ ದಿನ, ಕಾಲಗಳು ಬದಲಾಗುವ ಹಿನ್ನೆಲೆ ಪ್ರತಿ ವರ್ಷವೂ ಹೊಸ ವರ್ಷ ಮೊದಲು ಆಚರಿಸುವ ದೇಶ ಹಾಗೂ ಕೊನೆಯಗಾಗಿ ಸ್ವಾಗತಿಸುವ ದೇಶಗಳು ಬದಲಾಗುತ್ತವೆ. ಹೊಸ ವರ್ಷವನ್ನು ಸ್ವಾಗತಿಸುವ ದೇಶಗಳ ಪಟ್ಟಿಯಲ್ಲಿ ಭಾರತ ವಿಶ್ವದ 16ನೇ ದೇಶವಾಗಿದೆ. ಭಾರತದಲ್ಲೂ ಈ ಬಾರಿ ವಿಜೃಂಭಣೆಯಿಂದ ಹೊಸ ವರ್ಷ ಸ್ವಾಗತಕ್ಕೆ ತಯಾರಿ ನಡೆದಿದೆ. ಕಳೆದೆರಡು ವರ್ಷಗಳಲ್ಲಿ ಕೋವಿಡ್ ಕಾರಣದಿಂದಾಗಿ ಆಚರಣೆಗಳಿಗೆ ಬ್ರೇಕ್ ಬಿದ್ದಿತ್ತು. ಈ ಬಾರಿ ಹೊಸ ವರ್ಷ ಆಚರಣೆಗೆ ಮುಕ್ತವಾಗಿದ್ದು, ದೇಶದ ಹಲವು ನಗರಗಳು ಭರದ ಸಿದ್ಧತೆಯಲ್ಲಿವೆ.

2023ರ ವರ್ಷವನ್ನು ದ್ವೀಪರಾಷ್ಟ್ರ ನ್ಯೂಜಿಲೆಂಡ್ ಮೊದಲು ಸ್ವಾಗತಿಸಿತ್ತು. ಖ್ಯಾತ ಲೈಟ್‌ ಟವರ್‌ನ ಸಿಡಿಮದ್ದು ಪ್ರದರ್ಶನ ಗಮನ ಸೆಳೆದಿತ್ತು. ಈ ಕ್ಷಣಕ್ಕಾಗಿ ಇಡೀ ವಿಶ್ವ ಕಾದುಕುಳಿತಿತ್ತು. ಆದರೆ ಈ ಬಾರಿ ಟೊಂಗಾ, ಸಮೋವಾ ಮತ್ತು ಕಿರಿಬಾಟಿ ಸಣ್ಣ ರಾಷ್ಟ್ರಗಳು ಹೊಸ ವರ್ಷವನ್ನು ಮೊದಲು ಸ್ವಾಗತಿಸಲಿವೆ.




Tags

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries