ಕಾಸರಗೋಡು: ಚಟ್ಟಂಚಾಲ್ ಮಲಿಕ್ ದಿನಾರ್ ನಗರದಲ್ಲಿ ಡಿ. 30ರಂದು ನಡೆಯಲಿರುವ ಸಮಸ್ತ ಸಂಘಟನೆ ಶತಮಾನೋತ್ಸವ ಘೋಷಣಾ ಸಮಾವೇಶದ ಅಭಿಯಾನದ ಅಂಗವಾಗಿ ಸ್ವಾಗತ ಸಂಘದ ಎರಡು ಸಂದೇಶ ಯಾತ್ರೆಗಳಿಗೆ ಸೋಮವಾರ ಚಾಲನೆ ನೀಡಲಾಯಿತು.
ಉತ್ತರ ವಲಯ ಯಾತ್ರೆಯು ಕುಂಝತ್ತೂರಿನಿಂದ ಮತ್ತು ದಕ್ಷಿಣ ವಲಯ ಯಾತ್ರೆಯು ತ್ರಿಕರಿಪುರ ಬೀರಿಚ್ಚೇರಿಯಿಂದ ಆರಂಭಗೊಂಡಿತು. ಸಂದೇಶ ಯಾತ್ರೆಗಳ ಧ್ವಜ ವಿನಿಮಯ ಕಾರ್ಯಕ್ರಮದ ಎರಡೂ ಕೇಂದ್ರಗಳಲ್ಲಿ ಭಾನುವಾರ ನೆರವೇರಿತು. ಸಅದಿಯ್ಯ, ನೂರುಲ್ ಉಲಮಾ ಮಖಾಂ ಆವರಣದಲ್ಲಿ ಸಮಸ್ತ ಕೇಂದ್ರದ ಮುಶಾವರ್ ಸದಸ್ಯ ಮಾಣಿಕೋತ್ ಎ.ಪಿ.ಅಬ್ದುಲ್ಲಾ ಮುಸ್ಲಿಯಾರ್ ಅವರಿಗೆ ದಕ್ಷಿಣ ವಲಯ ಜಾಥಾ ನಾಯಕ ಸೈಯದ್ ಹಸನ್ ಅಹದಲ್ ಧ್ವಜ ಹಸ್ತಾಂತರಿಸಿದರು.
ಶಿರಿಯಾ ತಾಜುಸ್ಸರಿಯಾ ಮಖಾಂನಲ್ಲಿ ನಡೆದ ಸಮಾರಂಭದಲ್ಲಿ ಸಮಸ್ತ ಜಿಲ್ಲಾ ಉಪಾಧ್ಯಕ್ಷ ಸೈಯದ್ ಮುಹಮ್ಮದ್ ಇಬ್ರಾಹಿಂ ಪೂಕ್ಕುಞÂ ತಙಳ್ ಅವರು ಉತ್ತರ ವಲಯ ಯಾತ್ರಾ ನಾಯಕ ಮುಹಮ್ಮದಲಿ ಸಖಾಫಿ ತ್ರಿಕರಿಪುರ ಅವರಿಗೆ ಧ್ವಜ ಹಸ್ತಾಂತರಿಸಿದರು. ಈ ಸಂದರ್ಭ ಜಿಲ್ಲೆಯ ಧಾರ್ಮಿಕ ಮುಖಂಡರು ಪಾಲ್ಗೊಂಡಿದ್ದರು.

