ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿಯಲ್ಲಿ ನವೆಂಬರ್ 2022 ರಲ್ಲಿ ಆರಂಭಿಸಿದ ಎಬಿಸಿಡಿ ಶಿಬಿರದ ಅಧಿಕೃತ ಮುಕ್ತಾಯದ ಘೋಷಣೆಯನ್ನು ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಬದಿಯಡ್ಕ ಸಿಎಚ್ ಟರ್ಫ್ ಮೈದಾನದಲ್ಲಿ ಭಾನುವಾರ ನಿರ್ವಹಿಸಿದರು. ಬದಿಯಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಬಿ.ಶಾಂತಾ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಉಪಾಧ್ಯಕ್ಷ ಎಂ.ಅಬ್ಬಾಸ್, ವಾರ್ಡ್ ಸದಸ್ಯರು, ಜಿಲ್ಲಾ ಐಟಿ ಮಿಷನ್ ಸಂಯೋಜಕ ಕಪಿಲದೇವ್, ಸಹಾಯಕ ಪರಿಶಿಷ್ಟ ಪಂಗಡ ಅಭಿವೃದ್ಧಿ ಅಧಿಕಾರಿ ರಾಘವನ್ ಪಾಳಾಯಿ, ಪಂಚಾಯಿತಿ ಕಾರ್ಯದರ್ಶಿ ಸಿ.ರಾಜೇಂದ್ರನ್ ಮಾತನಾಡಿದರು.
ಯೋಜನೆಯ ಮೂಲಕ 1156 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 2923 ಸೇವೆಗಳ ಮೂಲಕ ಪರಿಶಿಷ್ಟ ಜಾತಿಗೆ ಮೂಲ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಕಾಸರಗೋಡು ಸಂಪರ್ಕಿಸುವ ಡಿಜಿಲಾಕರ್ ಯೋಜನೆಯನ್ನು ಜಿಲ್ಲಾಧಿಕಾರಿ ಉದ್ಘಾಟಿಸಿದರು. ಯೋಜನೆಯ ಅನುಷ್ಠಾನದಲ್ಲಿ ನವಜೀವನ ಹೈಯರ್ ಸೆಕೆಂಡರಿ ಶಾಲೆಯ ಎನ್‍ಎಸ್‍ಎಸ್ ಸಂಯೋಜಕ ಮಾಲಿದಿನಾರ್ ಮತ್ತು ಎನ್‍ಎಸ್‍ಎಸ್ ಸ್ವಯಂಸೇವಕರು ಭಾಗವಹಿಸಿದ್ದರು. ಪಂಚಾಯಿತಿಯ ಎಲ್ಲ ಸದಸ್ಯರಿಗೆ ಡಿಜಿಲಾಕರ್ ಅಳವಡಿಸಿ ಎಲ್ಲಾ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸುವುದು ಯೋಜನೆಯ ಉದ್ದೇಶವಾಗಿದೆ.

.jpg)
