HEALTH TIPS

ಅಂಚೆ ಕಚೇರಿ ಕಾಯ್ದೆಗೆ ತಿದ್ದುಪಡಿ: ರಾಜ್ಯಸಭೆಯಲ್ಲಿ ಅಂಗೀಕಾರ

               ವದೆಹಲಿ: ಅಂಚೆ ಕಚೇರಿ ಮಸೂದೆ 2023ಕ್ಕೆ ರಾಜ್ಯಸಭೆಯು ಸೋಮವಾರ ಅಂಗೀಕಾರ ನೀಡಿದೆ. ಈ ಮಸೂದೆಯು 125 ವರ್ಷಗಳಷ್ಟು ಹಳೆಯದಾದ ಭಾರತೀಯ ಅಂಚೆ ಕಚೇರಿ ಕಾಯ್ದೆಯನ್ನು ರದ್ದುಗೊಳಿಸುವ, ದೇಶದಲ್ಲಿನ ಅಂಚೆ ಕಚೇರಿಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಒಗ್ಗೂಡಿಸಿ, ತಿದ್ದುಪಡಿ ಮಾಡುವ ಉದ್ದೇಶ ಹೊಂದಿದೆ.

                'ದೇಶದ ಭದ್ರತೆಯ ಹಿತದೃಷ್ಟಿಯಿಂದ, ವಿದೇಶಗಳ ಜೊತೆಗಿನ ಸ್ನೇಹಸಂಬಂಧದ ದೃಷ್ಟಿಯಿಂದ, ಸಾರ್ವಜನಿಕ ಸುವ್ಯವಸ್ಥೆ, ತುರ್ತು ಸಂದರ್ಭ ಅಥವಾ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ಯಾವುದೇ ಕಾನೂನಿನ ಉಲ್ಲಂಘನೆಯಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ಯಾವುದೇ ಅಧಿಕಾರಿಗೆ ಯಾವುದೇ ವಸ್ತುವನ್ನು ಪರೀಕ್ಷಿಸುವ, ಅದನ್ನು ತೆರೆದು ನೋಡುವ ಅಥವಾ ಅದನ್ನು ವಶಕ್ಕೆ ತೆಗೆದುಕೊಳ್ಳುವ ಅಧಿಕಾರ ನೀಡಬಹುದು' ಎಂದು ಮಸೂದೆಯಲ್ಲಿ ಹೇಳಲಾಗಿದೆ.

                ಮಸೂದೆ ಕುರಿತು ನಡೆದ ಚರ್ಚೆಗೆ ಉತ್ತರ ನೀಡಿದ ಸಂವಹನ ಸಚಿವ ಅಶ್ವಿನಿ ವೈಷ್ಣವ್ ಅವರು, 'ರಾಷ್ಟ್ರದ ಹಿತಾಸಕ್ತಿಯನ್ನು ಗಮನದಲ್ಲಿ ಇರಿಸಿಕೊಂಡು ಈ ಅಂಶವನ್ನು ಮಸೂದೆಯಲ್ಲಿ ಸೇರಿಸಲಾಗಿದೆ' ಎಂದು ತಿಳಿಸಿದರು. ಈ ಮಸೂದೆಯನ್ನು ಮುಂಗಾರು ಅಧಿವೇಶನದ ಸಮಯದಲ್ಲಿ ಮಂಡಿಸಲಾಗಿತ್ತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries