HEALTH TIPS

ಭವಿಷ್ಯದ ಯುದ್ಧಕ್ಕೆ ಸಮಗ್ರ ಸುಧಾರಣೆ ಅಗತ್ಯ: ಏರ್‌ ಚೀಫ್‌ ಮಾರ್ಷಲ್‌ ಚೌಧರಿ

                 ಪುಣೆ: ಭವಿಷ್ಯದಲ್ಲಿ ನಡೆಯುವ ಯುದ್ಧಗಳು ಹೆಚ್ಚು ಸಂಕೀರ್ಣ, ಗೊಂದಲಕಾರಿ ಸ್ಪರ್ಧಾತ್ಮಕವಾಗಿರಲಿವೆ. ಅದಕ್ಕೆ ತಕ್ಕಂತೆ ನಮ್ಮ ಯುದ್ಧತಂತ್ರಗಳು ಹಾಗೂ ಶಸ್ತ್ರಾಸ್ತ್ರಗಳಲ್ಲಿ ಸುಧಾರಣೆಯ ಅಗತ್ಯವಿದೆ ಎಂದು ವಾಯುಪಡೆ ಮುಖ್ಯಸ್ಥ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌.ಚೌಧರಿ ಗುರುವಾರ ಹೇಳಿದ್ದಾರೆ.

                  ಇಲ್ಲಿನ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಲ್ಲಿ ಜನರಲ್‌ ಬಿ.ಸಿ.ಜೋಷಿ ಸಂಸ್ಮರಣೆ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

                'ವಾಯುಪಡೆ ನೀತಿ'ಯ ಇತ್ತೀಚಿನ ಆವೃತ್ತಿಯಲ್ಲಿ ಉಲ್ಲೇಖಿಸಲಾಗಿರುವ ಅಂಶಗಳನ್ನು ಪ್ರಸ್ತಾಪಿಸಿದ ಅವರು, 'ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ವೈಮಾಂತರಿಕ್ಷ ಶಕ್ತಿ ವೃದ್ಧಿಗೆ ಅಗತ್ಯವಿರುವಂತೆ ವಾಯುಪಡೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ' ಎಂದರು.

               ವಾಯುಪಡೆಯ ಸಾಮರ್ಥ್ಯ ವೃದ್ಧಿಗಾಗಿ ಸುಸಜ್ಜಿತ ಸಾಧನಗಳು, ಮಾನವರಹಿತ ವೇದಿಕೆಗಳು, ದೂರಸಂವೇದಿಗಳು, ಸಂವಹನ ಹಾಗೂ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳನ್ನು ಹೊಂದುವುದರ ಮಹತ್ವವನ್ನು ಸಹ ವಿವರಿಸಿದರು.'

                  ಆಧುನಿಕ ತಂತ್ರಜ್ಞಾನ ಹಾಗೂ ಈ ತಂತ್ರಜ್ಞಾನಗಳಲ್ಲಿ ತರಬೇತಿ ಹೊಂದಿದ ಸಿಬ್ಬಂದಿಯ ಅಗತ್ಯವಿದೆ ಎಂದ ಅವರು, ವಾಯುಪಡೆಯ ಸಾಮರ್ಥ್ಯ ವೃದ್ಧಿಗೆ ಕೃತಕಬುದ್ಧಿಮತ್ತೆ ಹಾಗೂ ಡೇಟಾ ಅನಲಿಟಿಕ್ಸ್‌ ಅಳವಡಿಕೆಯೂ ಅಗತ್ಯ ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries