HEALTH TIPS

ಕೈಗಳೇ ಇಲ್ಲದ ಅಂಗವಿಕಲೆಗೆ ಚಾಲನಾ ಪರವಾನಗಿ ವಿತರಣೆ!

                 ತಿರುವನಂತಪುರಂ: ಎರಡು ಕೈಗಳು ಇಲ್ಲದೆ ಜನಿಸಿದ್ದ ಕೇರಳದ ಇಡುಕ್ಕಿ ಮೂಲದ ಅಂಗವಿಕಲ ಮಹಿಳೆ ಜಿಲುಮೋಲ್ ಮೇರಿಯೆಟ್ ಎಂಬುವರು ನಾಲ್ಕು ಚಕ್ರವಾಹನದ ಚಾಲನಾ ಪರವಾನಗಿ ಪಡೆದ ಏಷ್ಯಾದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

              ಹಲವು ವರ್ಷಗಳ ಹೋರಾಟದ ಫಲವಾಗಿ ಶನಿವಾರ ಪಾಲಕ್ಕಾಡ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು, ಮೇರಿಯೆಟ್‌ ಅವರಿಗೆ ಪರವಾನಗಿ ವಿತರಿಸಿದ್ದಾರೆ.

               32 ವರ್ಷದ ಜಿಲುಮೋಲ್‌ ಸದ್ಯ ಕೊಚ್ಚಿಯಲ್ಲಿ ಗ್ರಾಫಿಕ್‌ ಕಲಾವಿದೆಯಾಗಿದ್ದಾರೆ. ನಾಲ್ಕು ಚಕ್ರವಾಹನದ ಚಾಲನಾ ಪರವಾನಗಿ ಪಡೆಯಬೇಕು ಎಂಬ ಆಕೆಯ ಹಲವು ವರ್ಷಗಳ ಕನಸಿಗೆ 'ವಿಐ ಇನೋವೇಷನ್ಸ್' ಹೆಸರಿನ ನವೋದ್ಯಮ ನೀರೆರೆದು ಪೋಷಿಸಿತು.

               ಆಕೆಯ ಕಾರಿನ ಇಂಡಿಕೇಟರ್‌, ವೈಪರ್‌, ಹೆಡ್‌ಲ್ಯಾಂಪ್‌ಗಳ ಕಾರ್ಯ ನಿರ್ವಹಣೆಗೆ ಧ್ವನಿ ನಿಯಂತ್ರಣ ಆಧಾರಿತ ವ್ಯವಸ್ಥೆ ರೂಪಿಸುವ ಮೂಲಕ ಕನಸುಗಳಿಗೆ ರೆಕ್ಕೆಯನ್ನೂ ಕಟ್ಟಿತು. ಚಾಲನಾ ಪರವಾನಗಿ ಪಡೆಯಲು ಅಗತ್ಯವಿರುವ ಪರೀಕ್ಷೆಗಳಲ್ಲಿ ಆಕೆಯು ಉತ್ತೀರ್ಣರಾಗಿದ್ದು, ಅಂಗವಿಕಲ ಕಾಯ್ದೆಯಡಿ ಕಲ್ಪಿಸಿರುವ ಹಕ್ಕಿನ ಅನ್ವಯ ಪರವಾನಗಿ ನೀಡಲಾಗಿದೆ.

                ವಿಶ್ವ ಅಂಗವಿಕಲರ ದಿನಾಚರಣೆಯಂದೇ ಆಕೆಯ ಈ ಸಾಧನೆಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries