HEALTH TIPS

ಬೇಹುಗಾರಿಕಾ ಉಪಗ್ರಹ ಉಡಾವಣೆ ಮಾಡಿದ ದಕ್ಷಿಣ ಕೊರಿಯಾ

                 ವಂಡೆನ್‌ಬರ್ಗ್‌ ಸ್ಪೇಸ್‌ ಫೋರ್ಸ್‌ ಬೇಸ್‌ (ಅಮೆರಿಕ): ಉತ್ತರ ಕೊರಿಯಾವು ಮೊದಲ ಬೇಹುಗಾರಿಕಾ ಉಪಗ್ರಹವನ್ನು ಕಕ್ಷೆಗೆ ಕಳುಹಿಸಿರುವುದಾಗಿ ಹೇಳಿದ ಒಂದು ವಾರದಲ್ಲೇ ದಕ್ಷಿಣ ಕೊರಿಯಾ ಸಹ ತನ್ನ ಮೊದಲ ಸೇನಾ ಬೇಹುಗಾರಿಕಾ ಉಪಗ್ರಹವನ್ನು ಶುಕ್ರವಾರ ಉಡಾವಣೆ ಮಾಡಿದೆ.

            ಫಾಲ್ಕನ್‌ 9 ರಾಕೆಟ್‌ ಮೂಲಕ ಕ್ಯಾಲಿಫೋರ್ನಿಯಾದ ವಂಡೆನ್‌ಬರ್ಗ್‌ ಬಾಹ್ಯಾಕಾಶ ನೆಲೆಯಿಂದ ನಭಕ್ಕೆ ಕಳುಹಿಸಿದೆ. ಸ್ಪೇಸ್‌ ಎಕ್ಸ್‌ನೊಂದಿಗಿನ ಒಪ್ಪಂದದ ಪ್ರಕಾರ 2025ರ ಒಳಗಾಗಿ ದಕ್ಷಿಣ ಕೊರಿಯಾ ಇಂಥ ಐದು ಉಪಗ್ರಹಗಳನ್ನು ಬಾಹ್ಯಾಹಾಶಕ್ಕೆ ಕಳುಹಿಸಲಿದೆ.

                ಕಳೆದ ವಾರವೇ ಉಪಗ್ರಹವನ್ನು ಉಡಾವಣೆ ಮಾಡುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದ ಕಾರಣದಿಂದ ಉಡಾವಣೆ ದಿನಾಂಕವನ್ನು ಮುಂದೂಡಲಾಗಿತ್ತು.

ದಕ್ಷಿಣ ಕೊರಿಯಾ ಇದುವರೆಗೂ ಬಾಹ್ಯಾಕಾಶದಲ್ಲಿ ಸ್ವಂತ ಸೇನಾ ಬೇಹುಗಾರಿಕಾ ಉಪಗ್ರಹವನ್ನು ಹೊಂದಿರಲಿಲ್ಲ. ಉತ್ತರ ಕೊರಿಯಾದ ಚಲನವನಗಳ ಮೇಲೆ ನಿಗಾ ವಹಿಸಲು ಅಮೆರಿಕದ ಉಪಗ್ರವನ್ನು ಅವಲಂಬಿಸಿತ್ತು.

                '  ಉಪಗ್ರಹದಿಂದ ದೇಶವು ಸ್ವತಂತ್ರ ಬಾಹ್ಯಾಕಾಶ ಕಣ್ಗಾವಲು ವ್ಯವಸ್ಥೆಯನ್ನು ಹೊಂದಲಿದೆ' ಎಂದು ರಕ್ಷಣಾ ಸಚಿವಾಲಯ ಹೇಳಿದೆ.

                  ಉಪ್ರಗಹವು ಕಕ್ಷೆ ಪ್ರವೇಶಿಸಿದೆ ಎಂದು ದಕ್ಷಿಣ ಕೊರಿಯಾ ಖಚಿತಪಡಿಸಿದೆ, ಆದರೆ ಉಪಗ್ರಹವು ಸರಿಯಾಗಿ ಕೆಲಸ ಮಾಡುತ್ತಿದೆಯೇ ಎಂದು ಪರಿಶೀಲಿಸಲು ಇನ್ನಷ್ಟು ಸಮಯ ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries