ಕಾಸರಗೋಡು: ಕ್ರಿಸ್ಮಸ್-ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಇತರ ರಾಜ್ಯಗಳಿಂದ ಕಾಸರಗೋಡು ಜಿಲ್ಲೆಗೆ ಭಾರಿ ಪ್ರಮಾಣದಲ್ಲಿ ಗಾಂಜಾ, ವಿದೇಶಿ ಮದ್ಯ ಸೇರಿದಂತೆ ಮಾದಕ ದ್ರವ್ಯ ರವಾನೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಬಕಾರಿ ದಳ ಸಿಬ್ಬಂದಿ ವಿವಿಧೆಡೆ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೂರು ಕಿಲೋ ಗಾಂಜಾ, ಮದ್ಯತಯಾರಿಗೆ ಸಂಗ್ರಹಿಸಿಟ್ಟಿದ್ದ ದ್ರಾವಣ, ತಂಬಾಕು ಉತ್ಪನ್ನ ವಶಪಡಿಸಿಕೊಂಡು ಒಬ್ಬನನ್ನು ಬಂಧಿಸಿದ್ದಾರೆ.
ಉಪ್ಪಳ ರೈಲ್ವೆ ನಿಲ್ದಾಣ ಸನಿಹದ ಜೈನಬಾ ಅಪಾರ್ಟ್‍ಮೆಂಟ್‍ಗೆ ಕುಂಬಳೆ ರೇಂಜ್ ಅಬಕಾರಿ ದಳ ಸಿಬ್ಬಂದಿ ನಡೆಸಿದ ದಾಳಿಯಲ್ಲಿ ಕೊಠಡಿಯೊಳಗೆ ದಾಸ್ತಾನಿರಿಸಿದ್ದ 2.75ಕಿ.ಗ್ರಾಂ ಗಾಂಜಾ, ಇದೇ ಅಪಾರ್ಟ್‍ಮೆಂಟ್‍ನ ವಠಾರದಲ್ಲಿ ಸಂಗ್ರಹಿಸಿಡಲಾಗಿದ್ದ 40ಕಿ.ಗ್ರಾಂ ನಿಷೇಧಿತ ತಂಬಾಕು ಉತ್ಪನ್ನ ವಶಪಡಿಸಿಕೊಂಡಿದ್ದಾರೆ. ಅಪಾರ್ಟ್‍ಮೆಂಟ್‍ನಲ್ಲಿ ವಾಸಿಸುತ್ತಿದ್ದ ಸಯ್ಯದ್ ಮಹಮ್ಮದ್ ಆರ್ಷಾದ್ ಎಂಬಾತನನ್ನು ಬಂಧಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಹೊಸದುರ್ಗ ತಾಲೂಕಿನ ಪಡನ್ನ ಓರಿಮುಖ್ ಪ್ರದೇಸದಲ್ಲಿಒ ಹೊಸದುರ್ಗ ಅಬಕಾರಿ ರೇಂಜ್ ಇನ್ಸ್‍ಪೆಕ್ಟರ್ ಸುಧೀರ್ ಕೆ.ಕೆ ನೇತೃತ್ವದ ಅಧಿಖಾರಿಗಳ ತಮಡ ನಡೆಸಿದ ಕಾರ್ಯಾಚರಣೆಯಲ್ಲಿ 1.96ಕಿ.ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ತುರ್ತಿ ಕಾಡಂಗೋಡು ನಿವಸಿ ಕುಞËಲಿ ಎಂಬಾತನ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ವೆಳ್ಳರಿಕುಮಡು ಪರಪ್ಪ ಪಳ್ಳಿಕುಳಂನ ಮನೆಯೊಂದಕ್ಕೆ ದಾಳಿ ನಡೆಸಿದ ನೀಲೇಶ್ವರ ಅಬಕಾರಿ ದಳ ಸಿಬ್ಬಂದಿ ಮದ್ಯ ತಯಾರಿಗಾಗಿ ಸಂಗ್ರಹಿಸಲಾಗಿದ್ದ 110ಲೀ. ಹುಳಿರಸ ಹಾಗೂ ಚೀಮೇನಿ ಆಯುರ್ವೇದ ಆಸ್ಪತ್ರೆ ಸನಿಹ ನಿರ್ಜನ ಪ್ರದೇಶದಲ್ಲಿ ದಾಸ್ತಾನಿರಿಸಿದ್ದ 65ಲೀ. ಹುಳಿರಸ ವಶಪಡಿಸಿಕೊಳ್ಳಲಾಗಿದ್ದು, ನಂತರ ಇದನ್ನು ನಾಶಗೊಳಿಸಲಾಗಿದೆ.

