HEALTH TIPS

ಕ್ರೂಸ್ ಕ್ಷಿಪಣಿ ಪರೀಕ್ಷೆ ನಡೆಸಿದ ಉ.ಕೊರಿಯಾ: ಖುದ್ದು ಮೇಲ್ವಿಚಾರಣೆ ನಡೆಸಿದ ಕಿಮ್

               ಸೀಲ್: ಜಲಾಂತರ್ಗಾಮಿ ನೌಕೆಯಿಂದ ಉಡಾವಣೆ ಮಾಡಲು ವಿನ್ಯಾಸಗೊಳಿಸಲಾದ ಹೊಸ ಕ್ರೂಸ್ ಕ್ಷಿಪಣಿಗಳ ಪರೀಕ್ಷಾರ್ಥ ಉಡಾವಣೆಗಳನ್ನು ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಮೇಲ್ವಿಚಾರಣೆ ಮಾಡಿದರು.

              ಜೊತೆಗೆ, ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆಯನ್ನು ನಿರ್ಮಿಸುವ ಪ್ರಯತ್ನಗಳನ್ನು ಪರಿಶೀಲಿಸಿದರು.

                 ಹೆಚ್ಚುತ್ತಿರುವ ಬಾಹ್ಯ ಬೆದರಿಕೆಗಳನ್ನು ಎದುರಿಸುವ ನಿಟ್ಟಿನಲ್ಲಿ ಪರಮಾಣು-ಸಜ್ಜಿತ ನೌಕಾಪಡೆಯನ್ನು ನಿರ್ಮಿಸುವ ಗುರಿಯನ್ನು ಪುನರುಚ್ಚರಿಸಿದರು ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ.

                 ಉತ್ತರ ಕೊರಿಯಾದ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸಿನ್‌ಪೋದ ಪೂರ್ವ ಬಂದರಿನ ಬಳಿ ಸಮುದ್ರದಲ್ಲಿ ಉತ್ತರ ಕೊರಿಯಾ ಕ್ರೂಸ್ ಕ್ಷಿಪಣಿಗಳನ್ನು ಹಾರಿಸುತ್ತಿರುವುದನ್ನು ದಕ್ಷಿಣ ಕೊರಿಯಾ ಮಿಲಿಟರಿಯು ಪತ್ತೆ ಹಚ್ಚಿದ ಒಂದು ದಿನದ ನಂತರ ಈ ವರದಿ ಬಂದಿದೆ.

                 ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಜಪಾನ್‌ನೊಂದಿಗೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ಉತ್ತರ ಕೊರಿಯಾದ ಶಸ್ತ್ರಾಸ್ತ್ರ ಪ್ರದರ್ಶನಗಳ ಸರಣಿ ಮುಂದುವರಿದಿದೆ.

                  ಉತ್ತರ ಕೊರಿಯಾದ ಅಧಿಕೃತ ಪತ್ರಿಕೆ ರೊಡಾಂಗ್ ಸಿನ್ಮುನ್, ಕನಿಷ್ಠ ಎರಡು ಕ್ಷಿಪಣಿಗಳನ್ನು ಪ್ರತ್ಯೇಕವಾಗಿ ಹಾರಿಸಿರುವ ಚಿತ್ರಗಳನ್ನು ಪ್ರಕಟಿಸಿದೆ. ನೀರಿನ ಮೇಲ್ಮೈಯಿಂದ ಸುಮಾರು 45 ಡಿಗ್ರಿ ಕೋನದಲ್ಲಿ ಗಾಳಿಯಲ್ಲಿ ಮೇಲೇರುತ್ತಿದ್ದಂತೆ ಎರಡೂ ಕ್ಷಿಪಣಿಗಳು ಬೂದು ಬಣ್ಣದ ಮೋಡಗಳನ್ನು ಸೃಷ್ಟಿಸಿದವು ಎಂದು ವರದಿ ತಿಳಿಸಿದೆ.

              ಇತ್ತೀಚಿನ ವರ್ಷಗಳಲ್ಲಿ, ಕಡಲ ಬೆದರಿಕೆಗಳನ್ನು ಎದುರಿಸಲು ಉತ್ತರ ಕೊರಿಯಾವು ಜಲಾಂತರ್ಗಾಮಿ ನೌಕೆಗಳಿಂದ ಉಡಾಯಿಸಲು ವಿನ್ಯಾಸಗೊಳಿಸಲಾದ ವಿವಿಧ ಕ್ಷಿಪಣಿಗಳನ್ನು ಪರೀಕ್ಷಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries