HEALTH TIPS

ತೂಕ ಇಳಿಸುವ 'ವೆಗೋವಿ' ಔಷಧಕ್ಕೆ ಸಮ್ಮತಿ ಸಾಧ್ಯತೆ

                ಫ್ರಾಂಕ್‌ಫರ್ಟ್‌: ಪಾರ್ಶ್ವವಾಯು ಮತ್ತು ಹೃದಯಾಘಾತದ ಅಪಾಯವನ್ನು ಕಡಿಮೆಗೊಳಿಸಲು ನೋವೊ ನಾರ್ಡಿಸ್ಕ್‌ ಕಂಪನಿಯ 'ವೆಗೋವಿ' ಔಷಧ ಬಳಕೆಗೆ ಯುರೋಪಿಯನ್‌ ಒಕ್ಕೂಟದ ಔಷಧ ನಿಯಂತ್ರಕವು ಈ ವಾರ ಅನುಮತಿ ನೀಡುವ ಸಾಧ್ಯತೆ ಇದೆ.

             ನೋವೊ ನಾರ್ಡಿಸ್ಕ್‌ ಡ್ಯಾನಿಷ್‌ ಕಂಪನಿಯಾಗಿದ್ದು, ಅದರ 'ವೆಗೋವಿ' ಅನ್ನು ತೂಕ ಇಳಿಸುವ ಔಷಧವಾಗಿ ಬಳಸಲಾಗುತ್ತಿದೆ.

                ಕಂಪನಿಯ ಈ ಔಷಧವಷ್ಟೇ ಅಲ್ಲದೆ ಮಧುಮೇಹ ಔಷಧ 'ಒಜೆಂಪಿಕ್‌'ಗೆ ಹೆಚ್ಚಿನ ಬೇಡಿಕೆಯಿದ್ದು, ಇವುಗಳಿಂದ ಕಳೆದ ಎರಡು ವರ್ಷಗಳಲ್ಲಿ ಕಂಪನಿಯ ಷೇರು ಮೌಲ್ಯ ದ್ವಿಗುಣಗೊಂಡಿದೆ.

ಸ್ಥೂಲಕಾಯ ಹೊಂದಿರುವ ರೋಗಿಗಳ ತೂಕವನ್ನು ಶೇ 15ರಷ್ಟು ಇಳಿಸಲು 'ವೆಗೋವಿ' ನೆರವಾಗುತ್ತಿದೆ. ಅಲ್ಲದೆ ಅದು ಹೃದಯಾಘಾತ, ಪಾರ್ಶ್ವವಾಯು ಅಥವಾ ಹೃದಯ ಸಂಬಂಧಿ ಕಾಯಿಲೆಯಿಂದ ಆಗುವ ಸಾವಿನ ಸಂಭವವನ್ನು ಶೇ 20ರಷ್ಟು ಕಡಿಮೆಗೊಳಿಸುತ್ತದೆ ಎಂಬುದು ಪ್ರಯೋಗಗಳಿಂದ ಗೊತ್ತಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries