HEALTH TIPS

ಸಾಂಕ್ರಾಮಿಕ: ಒಪ್ಪಂದಕ್ಕೆ ಮೇ ಒಳಗೆ ಸಹಿ ಹಾಕಲು ಡಬ್ಲ್ಯುಎಚ್‌ಒ ಕರೆ

              ಜಿನೇವಾ: 'ಸಾಂಕ್ರಾಮಿಕ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದಕ್ಕೆ ಮೇ ತಿಂಗಳ ಒಳಗೆ ಎಲ್ಲಾ ಸದಸ್ಯ ದೇಶಗಳು ಸಹಿ ಹಾಕದೇ ಹೋದಲ್ಲಿ, ಮುಂದಿನ ಪೀಳಿಗೆಯು ನಮ್ಮನ್ನು ಕ್ಷಮಿಸುವುದಿಲ್ಲ' ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಮುಖ್ಯಸ್ಥ ಟೆಡ್ರೋಸ್ ಅಧಾನಂ ಘೆಬ್ರಿಯೆಸಸ್‌ ಸೋಮವಾರ ಕಳವಳ ವ್ಯಕ್ತಪಡಿಸಿದರು.

            ಜಿನೇವಾದಲ್ಲಿ ನಡೆದ ಡಬ್ಲ್ಯುಎಚ್‌ಒ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಅವರು ಹೀಗೆ ಹೇಳಿದರು. ಸಾಂಕ್ರಾಮಿಕಗಳ ನಿರ್ವಹಣೆಗೆ ಸಂಬಂಧಿಸಿದ ಒಪ್ಪಂದ ಮತ್ತು ಅಂತರರಾಷ್ಟ್ರೀಯ ಆರೋಗ್ಯ ನಿಯಂತ್ರಣಕ್ಕೆ (ಐಎಚ್‌ಆರ್‌) ತಿದ್ದುಪಡಿ ತರುವ ಕುರಿತು ಈ ವರ್ಷ ಮೇ ಒಳಗೆ ನಿರ್ಣಯ ತೆಗೆದುಕೊಳ್ಳುವುದಾಗಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಎಂದು ಅವರು ನೆನಪಿಸಿದರು.

                'ನಮ್ಮ ಬಳಿ ಸಮಯ ಕಡಿಮೆಯಿದೆ. ನಿಗದಿತ ಸಮಯದಲ್ಲಿ ಒಪ್ಪಂದದ ಕುರಿತು ಸದಸ್ಯ ರಾಷ್ಟ್ರಗಳು ನಿರ್ಣಯ ತೆಗೆದುಕೊಳ್ಳಬೇಕು. ನಮ್ಮ ಮಕ್ಕಳು ಮತ್ತು ಮೊಮ್ಮಕ್ಕಳ ಭವಿಷ್ಯವನ್ನು ಕಾಪಾಡಲು ನೆರವಾಗುವಂಥ ಈ ಒಪ್ಪಂದದ ವಿಷಯದಲ್ಲಿ ಒಮ್ಮತಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಸದಸ್ಯ ರಾಷ್ಟ್ರಗಳನ್ನು ಕೋರುತ್ತೇನೆ' ಎಂದರು.

              ಡಬ್ಲ್ಯುಎಚ್‌ಒದ ನೀತಿ ನಿರ್ಣಯ ಸಮಿತಿಯ ವಾರ್ಷಿಕ ಸಭೆಯು ಮೇ 27ರಂದು ನಡೆಯಲಿದೆ. ಆ ವೇಳೆ ಒಪ್ಪಂದಕ್ಕೆ ಮುದ್ರೆ ಹಾಕಬೇಕು ಎಂದು ಈ ಹಿಂದೆ ನಿರ್ಧರಿಸಲಾತ್ತು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries