HEALTH TIPS

18-60 ವಯಸ್ಸಿನ ಮಹಿಳೆಯರಿಗೆ ಈ ವರ್ಷದಿಂದಲೇ ಮಾಸಿಕ ₹1,500: ಹಿಮಾಚಲ ಸಿಎಂ

              ಶಿಮ್ಲಾ: 2024-25ರ ಹಣಕಾಸು ವರ್ಷದಿಂದಲೇ ಸರ್ಕಾರವು 18ರಿಂದ 60 ವರ್ಷ ವಯಸ್ಸಿನ ಮಹಿಳೆಯರಿಗೆ ಮಾಸಿಕ ₹1,500 ನೀಡಲಿದೆ ಎಂದು ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರು ಘೋಷಿಸಿದ್ದಾರೆ.

                ವಿಧಾನಸಭೆ ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷವು ನೀಡಿದ್ದ 10 ಗ್ಯಾರಂಟಿಗಳ ಪೈಕಿ ಇದೂ ಸಹ ಒಂದಾಗಿದೆ.

               'ಇಂದಿರಾಗಾಂಧಿ ಪ್ಯಾರಿ ಬೆಹನಾ ಸುಖ್ ಸಮ್ಮಾನ್ ನಿಧಿ ಯೋಜನೆ'ಯಡಿ ವಾರ್ಷಿಕ ₹800 ಕೋಟಿ ವೆಚ್ಚ ಮಾಡಲಾಗುತ್ತದೆ. ಸುಮಾರು 5 ಲಕ್ಷ ಮಹಿಳೆಯರು ಇದರ ಲಾಭ ಪಡೆಯಲಿದ್ದಾರೆ ಎಂದು ಅವರು ಹೇಳಿದ್ದಾರೆ.

                  ಮಹಿಳೆಯರಿಗೆ ಮಾಸಿಕ ₹1,500 ನೀಡುವ ಮಾರ್ಗಸೂಚಿಗಳನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಹೇಳಿದರು. ಈ ಮೂಲಕ 10 ಗ್ಯಾರಂಟಿಗಳ ಪೈಕಿ 5 ಗ್ಯಾರಂಟಿ ಪೂರ್ಣಗೊಳ್ಳಲಿವೆ. ಹಳೆ ಪಿಂಚಣಿ ಜಾರಿಯು 1.36 ಲಕ್ಷ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದೂ ಹೇಳಿದ್ದಾರೆ.

ಬಜೆಟ್‌ನಲ್ಲಿ ಯೋಜನೆ ಘೋಷಿಸುವ ಇಚ್ಛೆ ಹೊಂದಿದ್ದೆ. ಆದರೆ, ಗದ್ದಲದಿಂದಾಗಿ ಸಾಧ್ಯವಾಗಲಿಲ್ಲ ಎಂದು ಅವರು ಹೇಳಿದರು.

                ಸಿಎಂ ಘೋಷಣೆ ಮತ್ತೊಂದು ಸುಳ್ಳು ಎಂದು ಜರಿದಿರುವ ವಿಪಕ್ಷ ನಾಯಕ ಜೈರಾಮ್ ಠಾಕೂರ್, ಬಜೆಟ್‌ನಲ್ಲಿ ಈ ಯೋಜನೆಗೆ ಅವಕಾಶವೇ ಇಲ್ಲ. ಏಪ್ರಿಲ್‌ನಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವುದರಿಂದ ಮಹಿಳೆಯರಿಗೆ ಹೇಗೆ ಹಣ ನೀಡಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದ 18ರಿಂದ 60 ವರ್ಷ ವಯಸ್ಸಿನ 22 ಲಕ್ಷ ಮಹಿಳೆಯರಿಗೆ ತಲಾ ₹ 1,500 ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಸದ್ಯ, ಸಾಮಾಜಿಕ ಕಲ್ಯಾಣ ಯೋಜನೆಯ ಫಲಾನುಭವಿಗಳಾಗಿರುವ 4.55 ಲಕ್ಷ ಮಹಿಳೆಯರಿಗೆ ಮಾತ್ರ ಈ ಹಣ ಸಿಗಲಿದೆಯೇ ಎಂಬ ಅನುಮಾನ ಕಾಡುತ್ತಿದೆ ಎಂದು ಠಾಕೂರ್ ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries