HEALTH TIPS

ಅನುವಾದಿತ ಕೃತಿಗಳಿಗೆ 2023ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

          ವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯು ಅನುವಾದಿತ ಕೃತಿಗಳಿಗೆ ನೀಡಲಾಗುವ 2023ನೇ ಸಾಲಿನ ಪ್ರಶಸ್ತಿಗಳನ್ನು ಇಂದು ಘೋಷಣೆ ಮಾಡಿದೆ. ಲೇಖಕ ಕೆ.ಕೆ.ಗಂಗಾಧರನ್ ಅವರ 'ಮಲಯಾಳಂ ಕತೆಗಳು' ಕನ್ನಡ ವಿಭಾಗದಿಂದ ಆಯ್ಕೆಯಾಗಿದೆ.

             ಇನ್ಫೊಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಬರೆದ 'ಮಕ್ಕಳಿಗೆ ನನ್ನ ನೆಚ್ಚಿನ ಕತೆಗಳು' ಕೃತಿಯ ಸಂಸ್ಕೃತ ಅನುವಾದ 'ರುಚಿರಃ ಬಾಲಕಥಹಃ' (ಅನುವಾದಕಿ: ನಾಗರತ್ನ ಹೆಗಡೆ) ಪ್ರಶಸ್ತಿಗೆ ಆಯ್ಕೆಯಾಗಿದೆ.


             ಕೋಟ ಶಿವರಾಮ್ ಕಾರಂತ ಅವರು ಬರೆದ 'ಚೋಮನ ದುಡಿ' ಕೃತಿಯ ಕಶ್ಮೀರಿ ಭಾಷೆಯ ಅನುವಾದ 'ಚೋಮ ಸುನ್‌ ದೋಲ್‌' (ಅನುವಾದಕ: ಗುಲ್‌ಝರ್ ಅಹ್ಮದ್ ರಥರ್) ಕೃತಿಯೂ ಆಯ್ಕೆಯಾಗಿದೆ.

             ಡಾ. ಎಂ.ಎಸ್ ಆಶಾದೇವಿ, ಕೇಶವ ಮಳಗಿ ಮತ್ತು ಪ್ರೊ ಎಸ್‌. ಸಿರಾಜ್ ಅಹ್ಮದ್‌ ಅವರು ಕನ್ನಡ ವಿಭಾಗದ ತೀರ್ಪುಗಾರರಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries