HEALTH TIPS

ಚುನಾವಣಾ ಕದನ ಕುತೂಹಲದ ಕೇಂದ್ರ ಪಾಲಕ್ಕಾಡ್

                   ತಿರುವನಂತಪುರಂ: ಪಾಲಕ್ಕಾಡ್ ಲೋಕಸಭಾ ಕ್ಷೇತ್ರ ರಾಜ್ಯದ ಅತ್ಯಂತ ಗಮನಾರ್ಹ ಜಿಲ್ಲೆಯಾಗಿದೆ. ಮತ್ತು ತಮಿಳುನಾಡು ಗಡಿ ವಾಳಯಾರ್ ನ ಮೂಲಕದ ಒಂದು ಬೇರೆಯದೇ ಗಾಳಿಯೂ ಪ್ರತ್ಯೇಕವಾಗಿದೆ.

                  ಇದರೊಂದಿಗೆ ಚುನಾವಣಾ ಕಾವು ಏರುತ್ತಿದ್ದಂತೆ ಪಾಲಕ್ಕಾಡ್ ಲೋಕಸಭಾ ಕ್ಷೇತ್ರ ರೋಚಕತೆ ಪಡೆದುಕೊಂಡಿದೆ. ಮೂರೂ ರಂಗಗಳು ಎರಡನೇ ಹಂತದ ಪ್ರಚಾರದಲ್ಲಿವೆ. ಮೊದಲು ಪ್ರಚಾರ ಆರಂಭಿಸಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಎನ್ ಡಿಎ ಅಭ್ಯರ್ಥಿ ಸಿ. ಕೃಷ್ಣಕುಮಾರ್ ಅವರೇ. ಏಳು ಕ್ಷೇತ್ರಗಳ ಬಹುತೇಕ ಪಂಚಾಯಿತಿಗಳಿಗೆ ತಲುಪಿದೆ. ಹಾಲಿ ಸಂಸದ ವಿ.ಕೆ. ಶ್ರೀಕಂಠನ್ ಯುಡಿಎಫ್ ಅಭ್ಯರ್ಥಿ. 1999ರಲ್ಲಿ ಪಾಲಕ್ಕಾಡ್ ನಿಂದ ಗೆದ್ದು ನಂತರ ಸೋತಿದ್ದ ಸಿಪಿಎಂ ಪಾಲಿಟ್ ಬ್ಯೂರೊ ಸದಸ್ಯ ಎ. ವಿಜಯರಾಘವನ್ ಎಡರಂಗದ ಅಭ್ಯರ್ಥಿ. ಮೂರೂ ರಂಗಗಳು ಬಲಿಷ್ಠರನ್ನು ಕಣಕ್ಕಿಳಿಸಿವೆ.

                    ಕಳೆದ ಬಾರಿ ಶ್ರೀಕಂಠನ್ ಕನಸು ಕಾಣದ ಯಶಸ್ಸು ಕಂಡಿದ್ದರು. ಎಡರಂಗದ ಎಂ.ಬಿ. ರಾಜೇಶ್ ಗೆಲುವಾಗಿತ್ತು. ಮತ ಎಣಿಕೆ ಪೂರ್ಣಗೊಂಡಾಗ ಪಟ್ಟಾಂಬಿ ವ್ಯಾಪ್ತಿಯಿಂದ ಮತ್ತು ಮನ್ನಾರ್ಕಾಡ್ ಜನರು ಶ್ರೀಕಂಠನ್ ಅವರನ್ನು ಗೆಲ್ಲಿಸಿದರು. ಪಟ್ಟಾಂಬಿಯಲ್ಲಿ 17,000 ಮತಗಳ ಬಹುಮತ ಬಂದಿದ್ದರೆ, ಮನ್ನಾರ್ಕಾಟ್ ನಲ್ಲಿ 30,000 ಮತಗಳು ಲಭ್ಯವಾಗಿತ್ತು. 

                 2014ರಲ್ಲಿ ಶೋಭಾ ಸುರೇಂದ್ರನ್ 1,36,687 ಮತಗಳನ್ನು ಗಳಿಸಿದ್ದರೆ, 2019ರಲ್ಲಿ ಸಿ. ಕೃಷ್ಣಕುಮಾರ್ 2,18,556ಕ್ಕೆ ಏರಿಕೆ ಕಂಡಿತ್ತು. ಇದಲ್ಲದೆ, ಅವರು ಪಾಲಕ್ಕಾಡ್ ಮತ್ತು ಮಲಂಬೌಜಾ ಕ್ಷೇತ್ರಗಳಲ್ಲಿ ಎರಡನೇ ಸ್ಥಾನ ಪಡೆದರು. ಇ.ಕೆ. ನಾಯನಾರ್, ಎ.ಕೆ. ಗೋಪಾಲನ್ ಗೆದ್ದ ಕ್ಷೇತ್ರ ಎಂಬ ಹೆಗ್ಗಳಿಕೆ ಈ ಕ್ಷೇತ್ರದ್ದು.  ಯಾವುದೇ ಪಕ್ಷ ಅಥವಾ ಸಂಯುಕ್ತ ಸಂಘಟನೆಗಳಿಗೆ ಇಲ್ಲಿ ನಿರ್ದಿಷ್ಟವಾದ ಬಾಂಧವ್ಯವಿಲ್ಲ. 1957 ರಲ್ಲಿ ಪಾಲಕ್ಕಾಡ್ ಲೋಕಸಭಾ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ, ಕಾಂಗ್ರೆಸ್ ಆರು ಬಾರಿ ಮತ್ತು ಎಡರಂಗ ಎಂಟು ಬಾರಿ ಗೆದ್ದಿದೆ. 1957ರಲ್ಲಿ ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಕಾಂಗ್ರೆಸ್ ಅಭ್ಯರ್ಥಿ ವೆಲ್ಲಾ ಐಚರಣ್ ಮತ್ತು ಕಮ್ಯುನಿಸ್ಟ್  ಪಕ್ಷದ ಅಭ್ಯರ್ಥಿ ಪಿ.ಕುಂಞ್ಞನ್ ಜಯಗಳಿಸಿದ್ದರು.  1999 ರಲ್ಲಿ, ಎ. ವಿಜಯರಾಘವನ್, ಯುಡಿಎಫ್ ನ ವಿ.ಎಸ್. ವಿಜಯರಾಘವನ್ ಅವರನ್ನು ಕೇವಲ 1286 ಮತಗಳಿಂದ ಪರಾಭವಗೊಳಿಸಿದ್ದರು.  ಆದರೆ 1991ರ ಚುನಾವಣೆಯಲ್ಲಿ 15,761 ಮತಗಳಿಂದ ವಿ.ಎಸ್., ಎ. ವಿಜಯರಾಘವನ್ ಅವರನ್ನು ಸೋಲಿಸಿದ್ದರು. ನಂತರ ಪಾಲಕ್ಕಾಡ್ ಆರು ಬಾರಿ ಎಡರಂಗದವರನ್ನು ಆರಿಸಿತ್ತು. 

                    ಪಾಲಕ್ಕಾಡಿಗೆ ಕೇಂದ್ರ ಸರ್ಕಾರ ಕಳೆದ ಹತ್ತು ವರ್ಷಗಳಿಂದ ವಿಶೇಷ ಗಮನ ನೀಡಿ ಪೋಷಿಸಿದೆ. ರೈಲ್ವೆ ನಿಲ್ದಾಣಗಳ ನವೀಕರಣ, ಐಐಟಿ ಅಳವಡಿಕೆ, ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ, ಪುಡ್ ಪಾರ್ಕ್, ಫಿಲ್ಮ್ ಪಾರ್ಕ್ ಹಾಗೂ ಅಟ್ಟಪಾಡಿಗೆ 2400 ಕೋಟಿ ರೂ.ಗಳ ಪ್ಯಾಕೇಜ್ ನೀಡಿದ್ದನ್ನು ಸಾಕ್ಷ್ಯಿಯಾಗಿಸಿ ಮತ ಯಾಚನೆ ಮಾಡಲಾಗುತ್ತಿದೆ. ಪಾಲಕ್ಕಾಡ್, ಮಲುಂಬುಜಾ ಮತ್ತು ಶೋರ್ನೂರ್ ಕ್ಷೇತ್ರಗಳಲ್ಲಿ ಬಿಜೆಪಿ ನಿರ್ಣಾಯಕ ಶಕ್ತಿಯಾಗಿದೆ.

                    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಾಲಕ್ಕಾಡ್ ಮತ್ತು ಮಲುಂಬುಜಾದಲ್ಲಿ ಯುಡಿಎಫ್ ಮತ್ತು ಬಿಜೆಪಿ ಎರಡನೇ ಸ್ಥಾನದಲ್ಲಿದ್ದರೆ, ಶೋರ್ನೂರಿನಲ್ಲಿ ಯುಡಿಎಫ್ ಮತ್ತು ಬಿಜೆಪಿ ನಡುವೆ 750 ಮತಗಳ ವ್ಯತ್ಯಾಸವಾಗಿತ್ತು. 52 ಸದಸ್ಯ ಬಲದ ಪಾಲಕ್ಕಾಡ್ ಮುನ್ಸಿಪಲ್ ಕೌನ್ಸಿಲ್ ಬಿಜೆಪಿ ಆಡಳಿತದಲ್ಲಿದೆ. ಶೋರ್ನೂರು ನಗರಸಭೆಯಲ್ಲಿ ಒಂಬತ್ತು ಮತ್ತು ಒಟ್ಟಪಾಲಂನಲ್ಲಿ ಒಬ್ಬ ಸ್ವತಂತ್ರ ಸೇರಿದಂತೆ ಒಂಬತ್ತು ಮಂದಿ ಇದ್ದಾರೆ. ಪಟ್ಟಾಂಬಿ ಮತ್ತು ಚೆರ್ಪುಳಸ್ಸೆರಿ ನಗರಸಭೆಗಳಲ್ಲೂ ಬಿಜೆಪಿ ಪಕ್ಷಕ್ಕೆ ಪ್ರಾತಿನಿಧ್ಯವಿದೆ. ವಿವಿಧ ಪಂಚಾಯಿತಿಗಳಲ್ಲೂ ಬಿಜೆಪಿ ನಿರ್ಣಾಯಕ ಶಕ್ತಿಯಾಗಿದೆ. ಬಿಜೆಪಿ ಪಾಲಕ್ಕಾಡ್‍ನಲ್ಲಿ 50,220, ಮಲಂಬೌಜಾದಲ್ಲಿ 50,200 ಮತ್ತು ಶೋರ್ನೂರ್‍ನಲ್ಲಿ 36,973 ಮತಗಳನ್ನು ಗಳಿಸಿದೆ. ಈ ಕ್ಷೇತ್ರಗಳಲ್ಲಿ ಪಟ್ಟಾಂಬಿ, ಶೋರ್ನೂರು, ಒಟ್ಟಪಾಲಂ, ಕೊಂಗಾಡ್, ಮನ್ನಾಕ್ರ್ಕಾಡ್, ಮಲುಂಬುಜಾ ಮತ್ತು ಪಾಲಕ್ಕಾಡ್ ಸೇರಿವೆ. ಈ ಪೈಕಿ ಮನ್ನಾರ್ಕಾಡ್ ಮತ್ತು ಪಾಲಕ್ಕಾಡ್ ಯುಡಿಎಫ್‍ನಲ್ಲಿ ಮತ್ತು ಉಳಿದ ಐದು ಎಲ್‍ಡಿಎಫ್ ನ ಪ್ರಭಾವೀ ವಲಯವಾಗಿದೆ. 

                  2019ರ ಲೋಕಸಭೆ ಚುನಾವಣೆಯ ನಂತರವೂ ಕೃಷ್ಣಕುಮಾರ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಯಾವುದೇ ಸಮಸ್ಯೆಗಳಿದ್ದರೂ ಮಧ್ಯಪ್ರವೇಶಿಸಿ ಹೋರಾಟಗಳನ್ನು ಮುನ್ನಡೆಸುವುದರಲ್ಲಿ ಮುಂಚೂಣಿಯಲ್ಲಿದ್ದಾರೆ. ಸತತ ನಾಲ್ಕು ಅವಧಿಗೆ ನಗರಸಭೆ ಸದಸ್ಯ ಹಾಗೂ ಉಪಾಧ್ಯಕ್ಷರಾಗಿದ್ದ ಕೃಷ್ಣಕುಮಾರ್ ಅವರು ಪಾಲಕ್ಕಾಡ್ ನಗರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದರು. ಅಮೃತ್ ಯೋಜನೆಯಡಿ ನಗರಕ್ಕೆ ಕೋಟ್ಯಂತರ ರೂಪಾಯಿಗಳ ಅಭಿವೃದ್ಧಿಗಳನ್ನು ತಂದಿದ್ದು ಅವರಲ್ಲಿ ಈಬಾರಿ ಭರವಸೆ ಹೆಚ್ಚಿದೆ ಎನ್ನಲಾಗುತ್ತಿದೆ. ಈ ಮಧ್ಯೆ ಎಡರಂಗದ ವಿಜಯರಾಘವನ್ ಪ್ರಭಾವೀ ವ್ಯಕ್ತಿಯಾಗಿ ಕಮ್ಯುನಿಸ್ಟ್ ಚಿಂತನೆಯ ಮೇರು ನೇತಾರನಾಗಿರುವುದೂ ಪೈಪೋಟಿ ನೀಡಲಿದ್ದಾರೆ ಎನ್ನಲಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries