ತಿರುವನಂತಪುರಂ: ಲೋಕಸಭೆ ಚುನಾವಣೆಗೆ ಮತದಾರರ ಪಟ್ಟಿಗೆ ಹೆಸರು ಸೇರಿಸಲು ಇನ್ನೊಂದು ಅವಕಾಶ ನೀಡಲಾಗಿದೆ. ಈ ತಿಂಗಳ 25ರವರೆಗೆ ಅರ್ಜಿ ಸಲ್ಲಿಸಬಹುದು.
1ನೇ ಏಪ್ರಿಲ್ 2024 ರೊಳಗೆ 18 ವರ್ಷ ವಯಸ್ಸು ಪೂರ್ಣಗೊಂಡವರು ಮೊದಲ ಮತ ಚಲಾವಣೆಗೆ ಅರ್ಜಿ ಸಲ್ಲಿಸಬಹುದು.
ಬೂತ್ ಮಟ್ಟದ ಅಧಿಕಾರಿಗಳು ಚುನಾವಣಾ ಆಯೋಗದ ಎನ್.ವಿ.ಎಸ್.ವಿ ಪೋರ್ಟಲ್ ಮತ್ತು ಮತದಾರರ ಸಹಾಯವಾಣಿ ಅಪ್ಲಿಕೇಶನ್ ಮೂಲಕ ಅರ್ಜಿ ಸಲ್ಲಿಸಬಹುದು.
https://electoralsearch.eci. gov.in/ ಈ ವೆಬ್ ಸೈಟಿನಲ್ಲಿ ನಮ್ಮ ಹೆಸರನ್ನು ಸರ್ಚ್ ಮಾಡಬಹುದು. ಒಂದು ನಿಮಿಷ ಸಾಕು ಅಷ್ಟೇ!
ಒಂದು ವೇಳೆ ನಿಮ್ಮ ಹೆಸರು ಬಿಟ್ಟುಹೋಗಿದ್ದಲ್ಲಿ ಸೇರಿಸಲು ಈ ವೆಬ್ ಸೈಟ್ ನಲ್ಲಿ ಅರ್ಜಿ ಹಾಕಿ. https://voterportal.eci.gov. in/





