ತಿರುವನಂತಪುರಂ: ಮೃತ ನೌಕರನನ್ನು ಕೆಎಸ್‍ಆರ್‍ಟಿಸಿ ವರ್ಗಾವಣೆ ಮಾಡಿದೆ. ಕಳೆದ ಡಿಸೆಂಬರ್ ನಲ್ಲಿ ನಿಧನರಾದ ಇನ್ಸ್ ಪೆಕ್ಟರ್ ವಿಭಾಗದ ನೌಕರ ಇ.ಜಿ.ಮಧು ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಕೆಎಸ್‍ಆರ್‍ಟಿಸಿ ಆಡಳಿತದ ಕಾರ್ಯನಿರ್ವಾಹಕ ನಿರ್ದೇಶಕರು ಹೊರಡಿಸಿರುವ ಆದೇಶದಲ್ಲಿ ಗಂಭೀರ ದೋಷ ಪತ್ತೆಯಾಗಿದೆ.
ಘಟನೆ ವಿವಾದವಾದ ನಂತರ ಕೆಎಸ್‍ಆರ್‍ಟಿಸಿ ಆದೇಶವನ್ನು ಹಿಂಪಡೆದಿದೆ. ಮೃತರ ವರ್ಗಾವಣೆ ಕುರಿತು ಕೆಎಸ್‍ಆರ್‍ಟಿಸಿ ನೌಕರರ ವಾಟ್ಸ್ಆ್ಯಪ್ ಗ್ರೂಪ್‍ಗಳಲ್ಲಿ ಚರ್ಚೆ ನಡೆಸಿದಾಗ ತಪ್ಪು ಬೆಳಕಿಗೆ ಬಂದಿದೆ. ಮಧು ಡಿಸೆಂಬರ್‍ನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಸಿಎಂಡಿ ಸೇರಿದಂತೆ ಪ್ರಮುಖರು ಅಂದು ಮಾಲಾರ್ಪಣೆ ಮಾಡಿದ್ದರು. ಮೃತರನ್ನು ಸೇವಾ ಪಟ್ಟಿಯಿಂದ ತೆಗೆದುಹಾಕದಿರುವುದು ವರ್ಗಾವಣೆ ಪಟ್ಟಿಗೆ ಸೇರ್ಪಡೆಯಾಗಲು ಕಾರಣವಾಗಿದೆ.





