ತಿರುವನಂತಪುರಂ: ಶೈಕ್ಷಣಿಕ ಉದ್ದೇಶಕ್ಕಾಗಿ ಖಾಸಗಿ ವೈದ್ಯಕೀಯ ಕಾಲೇಜುಗಳಿಗೆ ಮೃತದೇಹಗಳನ್ನು ನೀಡುವ ಮೂಲಕ ರಾಜ್ಯದ ಬೊಕ್ಕಸಕ್ಕೆ 3.66 ಕೋಟಿ ರೂ.ಆದಾಯ ಬಂದಿರುವುದಾಗಿ ತಿಳಿದುಬಂದಿದೆ.
2008ರಲ್ಲಿ ಮೃತದೇಹಗಳ ವರ್ಗಾವಣೆಗೆ ವಿಶೇಷ ಅವಕಾಶ ಕಲ್ಪಿಸಿದ ನಂತರದ ಅಂಕಿ ಅಂಶ ಇದಾಗಿದೆ.
ಇಲ್ಲಿಯವರೆಗೆ 1,122 ಹಕ್ಕುದಾರರಿಲ್ಲದೆ ದೇಹಗಳನ್ನು ಹಸ್ತಾಂತರಿಸಲಾಗಿದೆ. ಮೃತ ದೇಹಕ್ಕೆ 40,000 ರೂ. ಬೆಲೆ ನಿಗದಿಪಡಿಸಲಾಗಿದೆ. ಎಂಬಾಲ್ ಮಾಡದಿದ್ದರೆ 20,000 ರೂ. ನೀಡಿದರೆ ಸಾಕಾಗುತ್ತದೆ. ಎರ್ನಾಕುಳಂ ಜನರಲ್ ಆಸ್ಪತ್ರೆಯಿಂದ ಅತಿ ಹೆಚ್ಚು ಮೃತ ದೇಹಗಳನ್ನು ವರ್ಗಾಯಿಸಲಾಗಿದೆ - 599. ಪರಿರಾಮ್ ವೈದ್ಯಕೀಯ ಕಾಲೇಜು- 166, ತ್ರಿಶೂರ್ ವೈದ್ಯಕೀಯ ಕಾಲೇಜು- 157 ಮತ್ತು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು- 99 ಎಂಬಂತೆ ದೇಹ ವರ್ಗಾವಣೆ ನಡೆದಿದೆ.
ಖಾಸಗಿ ವೈದ್ಯಕೀಯ ಕಾಲೇಜುಗಳು ಶೈಕ್ಷಣಿಕ ಉದ್ದೇಶಗಳಿಗಾಗಿ ವಾರಸುದಾರರಿಲ್ಲದ ಮೃತ ದೇಹಗಳನ್ನು ದಾನವಾಗಿ ಪಡೆಯಲು 2008 ರಲ್ಲಿ ವಿಶೇಷ ನಿಬಂಧನೆಯನ್ನು ಮಾಡಲಾಗಿತ್ತು. ಅದಕ್ಕೂ ಮೊದಲು ಶವವನ್ನು ಖಾಸಗಿ ವೈದ್ಯಕೀಯ ಕಾಲೇಜುಗಳು ಎಲ್ಲಿಂದ ಪಡೆದುಕೊಂಡಿವೆ ಎಂಬುದು ತಿಳಿದಿಲ್ಲ. 2000 ರ ದಶಕದ ಆರಂಭದಲ್ಲಿ ಕೇರಳದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳನ್ನು ಪ್ರಾರಂಭಿಸಲಾಯಿತು. ಅಧ್ಯಯನದ ಉದ್ದೇಶಕ್ಕಾಗಿ 12 ಮಕ್ಕಳ ಒಂದು ಬ್ಯಾಚ್ ಗೆ ದೇಹದ ಅಗತ್ಯವಿದೆ. 60 ಮಕ್ಕಳ ಪ್ರತಿ ಬ್ಯಾಚ್‍ಗೆ ಐದು ದೇಹಗಳು. ಹೈಕೋರ್ಟ್‍ನಲ್ಲಿ ಸುದೀರ್ಘ ಹೋರಾಟಗಳ ನಂತರ ವಿಶೇಷ ನಿಬಂಧನೆಗನುಸಾರ ಈ ವ್ಯವಸ್ಥೆ ಜಾರಿಗೆ ಬಂದಿತ್ತು.





