ಕಾಸರಗೋಡು: ರಾಜ್ಯ ಪರಿಶಿಷ್ಠ ವರ್ಗ ರೆಸಿಡೆನ್ಸಿಯಲ್ ಎಜುಕೇಶನ್ ಸೊಸೈಟಿ ಅಧೀನದಲ್ಲಿರುವ ಪರಿಶಿಷ್ಠ ವರ್ಗ ಅಭಿವೃದ್ದಿ ಮಾದರಿ ವಸತಿ ಶಾಲೆ, ಕಾಸರಗೋಡು ಸಾವಿತ್ರಿ ಬಾಯಿ ಪುಳೆ ಮೆಮೋರಿಯಲ್ ಆಶ್ರಮ ಶಾಲೆಗಳಲ್ಲಿ ಹೈಯರ್ ಸೆಕೆಂಡರಿ ಶಿಕ್ಷಕರು, ಪ್ರೌಢಶಾಲಾ ಶಿಕ್ಷಕರು, ಎಲ್ ಪಿ ಎಸ್ ಎ, ಮುಖ್ಯ ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಕ್ತ ಆಧ್ಯಯನ ವರ್ಷಕ್ಕೆ ಪಿ ಎಸ್ ಸಿ ನಿರ್ಧರಿಸುವ ಯೋಗ್ಯತೆಯ ಆಧಾರದಲ್ಲಿ ದಿನವೇತನ ನೇಮಕಾತಿ ನಡೆಯಲಿರುವುದು.
ಸಾವಿತ್ರಿಭಾಯಿ ಫುಲೆ ಸ್ಮಾರಕ ಆಶ್ರಮ ಶಾಲೆ ಕುಂಡಂಗುಯಿ:
ಮುಖ್ಯ ಶಿಕ್ಷಕ, ಎಚ್ ಎಸ್ ಟಿ ದೈಹಿಕ ವಿಜ್ಞಾನ, ಎಚ್ ಎಸ್ ಟಿ ಮಲಯಾಳ, ಎಚ್ ಎಸ್ ಟಿ ಹಿಂದಿ, ಎಚ್ ಎಸ್ ಟಿ ಇಂಗ್ಲೀಷ್, ಎಚ್ ಎಸ್ ಟಿ ಗಣಿತ, ಎಚ್ ಎಸ್ ಟಿ ಸಮಾಜ ವಿಜ್ಞಾನ, ಎಚ್ ಎಸ್ ಟಿ ನೈಸರ್ಗಿಕ ವಿಜ್ಞಾನ, ಸಂಗೀತ ಶಿಕ್ಷಕ, ಎಲ್ ಪಿ ಎಸ್ ಎ ಕಂಪ್ಯೂಟರ್ ಬೋಧಕ, ಎಂ ಸಿ ಆರ್ ಟಿ, ದೈಹಿಕ ಶಿಕ್ಷಕ.
ಮಾದರಿ ವಸತಿ ಶಾಲೆ ಕಾಸರಗೋಡು:
ಎಚ್ ಎಸ್ ಟಿ ಇಂಗ್ಲಿಷ್ (ಜೂನಿಯರ್) , ಎಚ್ ಎಸ್ ಟಿ ಸಸ್ಯಶಾಸ್ತ್ರ (ಜೂನಿಯರ್),ಎಚ್ ಎಸ್ ಟಿ ಕಂಪ್ಯೂಟರ್ ಅಪ್ಲಿಕೇಶನ್, ಎಚ್ ಎಸ್ ಟಿ ಫಿಸಿಕಲ್ ಸೈನ್ಸ್, ಎಚ್ ಎಸ್ ಟಿ ಮಲಯಾಳ, ಎಚ್ ಎಸ್ ಟಿ ಹಿಂದಿ, ಎಚ್ ಎಸ್ ಟಿ ಇಂಗ್ಲೀಷ್, ಎಚ್ ಎಸ್ ಟಿ ಗಣಿತ, ಎಚ್ ಎಸ್ ಟಿ ಸಮಾಜ ವಿಜ್ಞಾನ, ಎಚ್ ಎಸ್ ಟಿ ನೈಸರ್ಗಿಕ ವಿಜ್ಞಾನ, ಸಂಗೀತ ಶಿಕ್ಷಕ, ಕಂಪ್ಯೂಟರ್ ಶಿಕ್ಷಕ, ಎಂ ಸಿ ಆರ್ ಟಿ ಗ್ರಂಥಪಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾಣಿಸಲಾಗಿದೆ.
ನಿರ್ದಿಷ್ಟ ವಿದ್ಯಾರ್ಹತೆ ಮತ್ತು 40 ವರ್ಷ ಮೇಲ್ಪಟ್ಟ ಅನುಭವ ಹೊಂದಿರುವ ಅಭ್ಯರ್ಥಿಗಳು ಮುಖ್ಯ ಶಿಕ್ಷಕರ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ವಸತಿ ಸ್ವಭಾವದ ಸಂಸ್ಥೆಯಾಗಿರುವುದರಿಂದ ಸಂಸ್ಥೆಯಲ್ಲಿ ವಾಸಿಸಿ ಕಲಿಸಲು ಒಪ್ಪಿಗೆ ಇರುವವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ನೇಮಕಾತಿಯು 2024-25 ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಅಥವಾ ಮಾರ್ಚ್ 31, 2025 ರವರೆಗೆ ಮಾತ್ರ ಇರುತ್ತದೆ. ಪ್ರಸಕ್ತ ಹುದ್ದೆಗೆಕಾಯಂ ಶಿಕ್ಷಕರನ್ನು ನೇಮಿಸಿದರೆ, ಆಯಾ ಸಂಸ್ಥೆಯಲ್ಲಿನ ನೇಮಕಾತಿಯನ್ನು ಸ್ವಯಂಪ್ರೇರಿತವಾಗಿ ರದ್ದುಗೊಳಿಸ ಬೇಕಾಗಬಹುದು. ನೇಮಕಗೊಂಡ ಶಾಲೆಗಳಿಂದ ಇಲಾಖೆಯ ಇತರ ಸಂಸ್ಥೆಗಳಿಗೆ ವರ್ಗಾವಣೆಯನ್ನು ಅನುಮತಿಸಲಾಗುವುದಿಲ್ಲ. ಈ ಅವಧಿಯಲ್ಲಿ ಹೈಯರ್ ಸೆಕೆಂಡರಿ ಶಿಕ್ಷಕರಿಗೆ ರೂ.1205, ಪ್ರೌಢಶಾಲಾ ಶಿಕ್ಷಕರಿಗೆ ರೂ.1100, ಪ್ರಾಥಮಿಕ ಶಿಕ್ಷಕರಿಗೆ ರೂ.955 ಮತ್ತು ಇತರ ಹುದ್ದೆಗಳಿಗೆ ಪ್ರಸ್ತುತ ಸರ್ಕಾರದ ಆದೇಶದಂತೆ ಮೊತ್ತವನ್ನು ಪಡೆಯಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 15ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(04994 255466)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.




