ಕಾಸರಗೋಡು: ನಗರದ ಕೆಪಿಆರ್ ರಾವ್ ರಸ್ತೆಯ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸನಿಹ ಚಟುವಟಿಕೆ ನಡೆಸುತ್ತಿರುವ ನಗರಸಭಾ ಕುಟುಂಬಶ್ರೀ ತರಕಾರಿ ಸ್ಟಾಲ್‍ನ ಬೀಗ ಒಡೆದು ನುಗ್ಗಿದ ಕಳ್ಳರು 5ಸವಿರ ರೂ. ನಗದು ಕಳವುಗೈದಿದ್ದಾರೆ. ಅಲ್ಲದೆ ಸನಿಹದಲ್ಲಿರುವ ಪ್ರಭನ್ ಎಂಬವರ ಲಾಟರಿ ಸ್ಟಾಲಿನ ಬೀಗ ಒಡೆದು ಕಳವಿಗೆ ಯತ್ನಿಸಲಾಗಿದೆ. ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕಳೆದ ಒಂದು ವಾರದಿಂದ ನಗರಠಾಣೆ ವ್ಯಾಪ್ತಿಯ ವಿವಿಧೆಡೆ ಅಂಗಡಿಗಳಿಂದ ಕಳವು ನಡೆಯುತ್ತಿದ್ದು, ರಾತ್ರಿ ವೇಳೆ ಪೊಲೀಸ್ ಪೆಟ್ರೋಲಿಂಗ್ ಚುರುಕುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.




