ಕುಂಬಳೆ: ಕುಂಬಳೆ ಮಾರ್ಕೆಟ್ ಬಳಿ ಘರ್ಷಣೆ ನಡೆದು, ವ್ಯಕ್ತಿಯೊಬ್ಬ ಇರಿದ ಪರಿಣಾಮ ಕೋಳಿ ಅಂಗಡಿ ಮಾಲಿಕ ಸೇರಿದಂತೆ ಇಬ್ಬರು ಗಾತಗೊಂಡಿದ್ದಾರೆ. ಮಾಟೆಂಗುಳಿ ನಿವಾಸಿ ಅನ್ವರ್ ಕೆ.ಎ ಹಾಗೂ ಕಂಚೆಕಟ್ಟೆ ನಿವಾಸಿ ಇಬ್ರಾಹಿಂ ಕೆ.ಎ ಗಾಯಾಳುಗಳುತಿವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಶಾಂತಿಪಳ್ಳ ನಿವಾಸಿ ಆರಿಫ್ ಎಂಬಾತನ ವಿರುದ್ಧ ಕುಂಬಳೆ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಕೋಳಿ ಅಂಗಡಿ ಮಾಲಿಕ ಅನ್ವರ್ ಅವರಿಗೆ ಶಾಂತಿಪಳ್ಳ ನಿವಾಸಿ ಆರಿಫ್ ಹಣ ನೀಡಲು ಬಾಕಿಯಿದ್ದು, ಈ ಹಣವನ್ನು ವಾಪಾಸು ಕೇಳಿದಾಗ ಆರಿಫ್ ವಾಗ್ವಾದ ನಡೆಸಿದ್ದಾನೆ. ಇವರೊಳಗೆ ಪರಸ್ಪರ ಹೊಡೆದಾಟ ನಡೆದಿದ್ದು, ಈ ಸಂದರ್ಭ ಆರಿಫ್ ಅಂಗಡಿಯೊಳಗಿಂದ ಕೋಳಿ ಮಾಂಸ ತುಂಡರಿಸುವ ಕತ್ತಿ ತೆಗೆದು ಯದ್ವಾತದ್ವ ಬೀಸಿದ್ದಾನೆ. ಇದರಿಂದ ಅನ್ವರ್ ಹಾಗೂ ಇಬ್ರಾಹಿಂ ಗಾಯಗೊಂಡಿದ್ದಾರೆ. ಅನ್ವರ್ ಅವರ ತಲೆ, ಕೈ, ಕಾಲಿಗೆ ಹಾಗೂ ಇಬ್ರಾಹಿಂ ಅವರ ಕಾಲಿಗೆ ಗಾಯಗಳುಂಟಾಗಿದೆ.




