ಕುಂಬಳೆ: ವಾಣಿಯ ಸಮುದಾಯದ ಕುಲದೇವತೆ ಪೆರ್ಣೆ ಶ್ರಿ ಮುಚ್ಚಿಲೋಟ್ ಭಗವತೀ ಕ್ಷೇತ್ರದಲ್ಲಿ ಸಮಾಜ ಬಾಂಧವರ ವದುವರರ ಸಾಮೂಹಿಕ ವಿವಾಹ ಮಂಗಳವಾರ ಶ್ರೀಕ್ಷೇತ್ರದಲ್ಲಿ ಜರುಗಿತು. ಕಾಸರಗೋಡು, ದ.ಕ ಸೇರಿದಂತೆ ವಿವಿಧ ಜಿಲ್ಲೆಗಳ ಒಂಬತ್ತು ಜೋಡಿ ವಧೂವರರು ಶ್ರೀಕ್ಷೇತ್ರದಲ್ಲಿ ವಿವಾಹಿತರಾದರು. ಇದೇ ಸಂದರ್ಭ ಶ್ರೀ ಕ್ಷೇತ್ರದಲ್ಲಿ ಸಂಭ್ರಮದ ಕಳಿಯಾಟ ಮಹೋತ್ಸವ ಸಂಪನ್ನಗೊಂಡಿರುವ ಹಿನ್ನೆಲೆಯಲ್ಲಿ ಮೇಲೇರಿಯ ಕರಿ ಗುಡಿಸುವ ಸಂಪ್ರದಾಯವೂ ನಡೆಯಿತು. ತಂತ್ರಿ ವರ್ಯರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.





