HEALTH TIPS

ಭಾರತೀಯ ರಾಜ್ಯ ಪೆನ್ಷನರ್ಸ್ ಮಹಾ ಸಂಘ ಜಿಲ್ಲಾ ಸಮಿತಿ ಸಭೆ-ಎನ್‍ಡಿಎ ಬೆಂಬಲಿಸಲು ತೀರ್ಮಾನ

                 ಕಾಸರಗೋಡು: ಭಾರತೀಯ ರಾಜ್ಯ ಪೆನ್ಷನರ್ಸ್ ಮಹಾ ಸಂಘದ(ಬಿಆರ್‍ಪಿಎಂಎಸ್)ಕಾಸರಗೋಡು ಜಿಲ್ಲಾ ಘಟಕದ ಸಭೆ ಚಂದ್ರಗಿರಿ ಶ್ರೀ ಶಾಂತೇರಿ ಮಹಾಮಾಯ ಕ್ಷೇತ್ರ ಪರಿಸರದಲ್ಲಿ ಜರುಗಿತು. ರಾಷ್ಟ್ರೀಯ ಸಮಿತಿ  ಅಧ್ಯಕ್ಷ ಸಿ. ಎಚ್. ಸುರೇಶ್ ಸಮಾರಂಭ ಉದ್ಘಾಟಿಸಿದರು. ಬಿ ಆರ್ ಪಿ ಎಂ ಎಸ್ ಕಾಸರಗೋಡು ಜಿಲ್ಲಾ ಘಟಕದ ಅಧ್ಯಕ್ಷ ಎಂ. ಬಾಲಕೃಷ್ಣ  ಅಧ್ಯಕ್ಷತೆ ವಹಿಸಿದ್ದರು. 

            ಈ ಸಂದರ್ಭ ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ-ಎನ್ ಡಿ ಎ ಅಭ್ಯರ್ಥಿ ಶ್ರೀಮತಿ ಎಂ. ಎಲ್. ಅಶ್ವಿನಿ ಯವರನ್ನು ಬೆಂಬಲಿಸಲು ಸಭೆ ತೀರ್ಮಾನಿಸಿತು. ಸಮಾರಂಭಕ್ಕೆ  ಆಗಮಿಸಿದ ಅಭ್ಯರ್ಥಿ ಅಶ್ವಿನಿ ಎಂ.ಎಲ್ ಅವರಿಗೆ ಸಂಘದ ವತಿಯಿಂದ ಸ್ವಾಗತ ನೀಡಲಾಯಿತು.  

         ಬಿಜೆಪಿ ಸ್ಟೇಟ್ ಕೌನ್ಸಿಲ್ ಸದಸ್ಯ ವಿ. ರವೀಂದ್ರನ್, ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರ್ ರೈ, ಕಾಸರಗೋಡು ನಗರಸಭಾ ಕೌನ್ಸಿಲರುಗಳಾದ ಪಿ. ರಮೇಶ್, ಶ್ರೀಲತಾ ಟೀಚರ್

          ಬಿಜೆಪಿ ಉದುಮ ಮಂಡಲ ಸಮಿತಿ ಅಧ್ಯಕ್ಷ ಪುರುಷೋತ್ತಮ್, ಕಳನಾಡ್ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ್ , ಹಿಂದೂ ಐಕ್ಯ ವೇದಿಯ ಸುರೇಶನ್, ಬಿ. ಆರ್. ಪಿ. ಎಂ. ಎಸ್. ನ ಉಮಾದೇವಿ, ಶ್ರೀಕಂಠನ್, ಇ. ಕೆ. ರವೀಂದ್ರನ್, ಕೆ. ಕುಞÂಕಣ್ಣನ್, ಶಾಂತೇರಿ ಮಹಾಮಾಯಿ ತರವಾಡು ಟ್ರಸ್ಟಿನ ಅಧ್ಯಕ್ಷ ಅಮರ್‍ನಾಥ್, ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳು  ಉಪಸ್ಥಿತರಿದ್ದರು. ಕಾರ್ಯದರ್ಶಿ ಜಯೇಂದ್ರ ಸಿ. ಎಚ್. ಸ್ವಾಗತಿಸಿದರು.  ದೇಶೀಯ ಕೋಶಾಧ್ಯಕ್ಷ ಕೆ.ದಯಾನಂದ ಮುಜುಂಗಾವು ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries