HEALTH TIPS

ಇಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಪ್ರಸಾರವಾಗುವ ರಾಜಕೀಯ ಜಾಹೀರಾತುಗಳಿಗಾಗಿ ಎಂ ಸಿ ಎಂ ಸಿ ಅನುಮತಿ ಪ್ರಮಾಣ ಪತ್ರ ಕಡ್ಡಾಯ.


                 ಕಾಸರಗೋಡು :ಇಲೆಕ್ಟ್ರಾನಿಕ್ಸ್ ಮಾಧ್ಯಮಗಳಲ್ಲಿ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ (MCMC) ಯಿಂದ ಅನುಮತಿ ಪ್ರಮಾಣ ಪತ್ರ ಕಡ್ಡಾಯವಾಗಿದೆ.
             ದೂರದರ್ಶನ /ಕೇಬಲ್ ಚಾನೆಲ್‌ಗಳು, ಬಲ್ಕ್ ಎಸ್‌ಎಂಎಸ್, ಧ್ವನಿ ಸಂದೇಶ, ಇ-ಪೇಪರ್, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವ ಆಡಿಯೊ/ವಿಡಿಯೋ, ಅಂತರ್ಜಾಲ - ಸಾಮಾಜಿಕ ಮಾಧ್ಯಮ ವೆಬ್‌ಸೈಟ್‌ಗಳು, ಸಿನಿಮಾ ಮಂದಿರ ಮತ್ತು ರೇಡಿಯೊದಲ್ಲಿ ನೀಡುವ ರಾಜಕೀಯ ಜಾಹೀರಾತುಗಳಿಗೆ ಅನುಮತಿ ಪ್ರಮಾಣಪತ್ರ ಕಡ್ಡಾಯವಾಗಿದೆ.  
              ಮತದಾನ ನಡೆಯುವ ಹಿಂದಿನ ದಿನ ಹಾಗೂ ಮತದಾನದ ದಿನದಂದು ಮುದ್ರಣ/ ಪ್ರಸಾರ ಮಾಧ್ಯಮಗಳ ಮೂಲಕ ಪ್ರಕಟವಾಗುವ ರಾಜಕೀಯ ಜಾಹೀರಾತುಗಳಿಗೂ, ಚುನಾವನೆಗೆ ಸಂಬಂಧಿಸಿದ ವಿಷಯಗಳಿಗೆ ಪೂರ್ವಭಾವಿಯಾಗಿ ಅನುಮತಿ ಪ್ರಮಾಣ ಪತ್ರ ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಕೆ.ಇಂಬಾಶೇಖರ್ ಮಾಹಿತಿ ನೀಡಿದ್ದಾರೆ.
              ಜಿಲ್ಲಾ ಚುನಾವಣಾಧಿಕಾರಿಯ ಅಧ್ಯಕ್ಷತೆಯಲ್ಲಿರುವ ಎಂಸಿಎಂಸಿ ಸಮಿತಿಯು ಅರ್ಜಿಯನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡುವುದು. ಎಂ ಸಿ ಎಂ ಸಿ ಪ್ರಮಾಣ ಪತ್ರವಿಲ್ಲದೆ ಜಾಹೀರಾತುಗಳನ್ನು ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ ಪ್ರಜಾಪ್ರತಿನಿಧಿ ಕಾಯ್ದೆಯ ವಿವಿಧ ವಿಭಾಗಗಳ ಪ್ರಕಾರ ಮತ್ತು 2004 ರ ಏಪ್ರಿಲ್ 13 ರ ಸುಪ್ರೀಂ ಕೋರ್ಟ್ ತೀರ್ಪಿನ ಉಲ್ಲಂಘನೆಯಾಗಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
                  ಜಾಹೀರಾತುಗಳನ್ನು ಪ್ರಸಾರ/ ಪ್ರಕಟಿಸುವಾಗ ಎಂ ಸಿ ಎಂ ಸಿ ಪ್ರಮಾಣೀಕೃತ ಜಾಹೀರಾತುಗಳಾಗಿವೆಯೇ? ಎಂಬುದನ್ನು ಮಾಧ್ಯಮಗಳು ಖಾತರಿಪಡಿಕೊಳ್ಳಬೇಕು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries