HEALTH TIPS

ಗೋಳಿತ್ತಾರು ಮಂದಿರದ ಪ್ರತಿಷ್ಠಾ ಮಹೋತ್ಸವಕ್ಕೆ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ

                 ಪೆರ್ಲ: ಗೋಳಿತ್ತಾರು ಶ್ರೀಸಿದ್ಧಿ ವಿನಾಯಕ ಭಜನಾ ಮಂದಿರದ 14ನೇ ವಾರ್ಷಿಕೋತ್ಸವ ಮತ್ತು ದೇವರ ಬೆಳ್ಳಿಯ ಛಾಯಾಚಿತ್ರ ಪ್ರತಿಷ್ಠಾಪನೆಯ ಅಂಗವಾಗಿ ಭಾನುವಾರ ಸಂಜೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ನಡೆಯಿತು. ಬಜಕೂಡ್ಲು  ಶ್ರೀದುರ್ಗಾಪರಮೇಶ್ವರೀ ಭಜನಾ ಮಂದಿರದಿಂದ ಹೊರಟ ಮೆರವಣಿಗೆಯಲ್ಲಿ ಸಿಂಗಾರಿ ಮೇಳ, ಗೊಂಬೆ ಕುಣಿತ,ಭಜನೆ, ಚೆಂಡೆ ಮೇಳಗಳು ಆಕರ್ಷಕವೆನಿಸಿದವು. ಬಜಕೂಡ್ಲು ಮಂದಿರದ ಅರ್ಚಕÀ ಐತ್ತಪ್ಪ ನಾಯ್ಕ ಅವರ ವಿಶೇಷ ಪ್ರಾರ್ಥನೆಯ ಬಳಿಕ ಹೊರಟ ಮೆರವಣಿಗೆಯಲ್ಲಿ ಬೆಳ್ಳಿಯ ಛಾಯಾಚಿತ್ರವನ್ನು ಶೋಭಾಯಾತ್ರೆಯ ಮೂಲಕ ಮಂದಿರಕ್ಕೆ ತರಲಾಯಿತು. 


             ಗೋಳಿತ್ತಾರು ಮಂದಿರ ಗೌರವಾಧ್ಯಕ್ಷ ಶ್ರೀರಾಮ ಭಟ್ ಗುಂಡಿತ್ತಾರು, ಅಧ್ಯಕ್ಷ ಕಮಲಾಕ್ಷ ಪೂಜಾರಿ ಕಾನ, ಜನಾರ್ಧನ ರೈ ಸೇರಾಜೆ,ನವೀನ್ ನಾಯಕ್, ರವಿ ಎಸ್.ಎಂ,  ವಿನೀತ್ ಕಾನ, ಸಂತೋಷ್ ಗೋಳಿತ್ತಾರು, ದಿವಾಕರ ನಾಯಕ್, ಜಯಂತ ಸೇರಾಜೆ, ಸುಂದರ ಪೆರಿಯಡ್ಕ, ಹರೀಶ ಸೇರಾಜೆ, ಗಿರಿಯಪ್ಪ ಪೂಜಾರಿ ಗುಂಡಿತ್ತಾರು, ಬಾಬು ಪೂಜಾರಿ ಕಾನ, ಸಂಜೀವ ಪೂಜಾರಿ ಸಂಟನಡ್ಕ ಹಾಗೂ ಮಹಿಳಾ ಸಮಿತಿ, ಯುವ ಸಮಿತಿ ಸದಸ್ಯರು ಮೆರವಣಿಗೆಗೆ ನೇತೃತ್ವವಹಿಸಿದರು. ಈ ಸಂದರ್ಭ ಮಹೇಶ್ ಉಪಾಧ್ಯಾಯ ಸಾರಡ್ಕ ಉಗ್ರಾಣ ಮುಹೂರ್ತ ನೆರೆವೇರಿಸಿದರು. ಕುಕ್ಕಾಜೆ ಶ್ರೀಕಾಳಿಕಾಂಬ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಕಾರ್ಯಲಯ ಉದ್ಘಾಟಿಸಿದರು. ಬಳಿಕ ತಂತ್ರಿಗಳಾದ ಕಶೆಕೋಡಿ ಸೂರ್ಯನಾರಾಯಣ ಭಟ್ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.  ಸಾಮೂಹಿಕ ಪ್ರಾರ್ಥನೆ, ವೈದಿಕ ತಾಂತ್ರಿಕ ವಿಧಿ ವಿಧಾನಗಳು ಜರಗಿತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries