HEALTH TIPS

ಅರುಣಾಚಲ ಪ್ರದೇಶ ನಮ್ಮದು: ಚೀನಾದಿಂದ ಮತ್ತೆ ಪ್ರತಿಪಾದನೆ

               ಬೀಜಿಂಗ್: 'ಅರುಣಾಚಲ ಪ್ರದೇಶ ಭೌಗೋಳಿಕವಾಗಿ ತನ್ನ ಗಡಿಗೇ ಸೇರಿದ್ದಾಗಿದೆ' ಎಂದು ಚೀನಾ ಮತ್ತೊಮ್ಮೆ ಪ್ರತಿಪಾದಿಸಿದೆ. ಈ ಹಿಂದೆಯೂ ಚೀನಾ ಹೀಗೆ ಪ್ರತಿಪಾದಿಸಿತ್ತು. ಆಗ, 'ಇದು ಅಸಂಬದ್ಧ ಹಾಗೂ ಹಾಸ್ಯಾಸ್ಪದ' ಎಂದು ಭಾರತ ತಳ್ಳಿಹಾಕಿತ್ತು.

               ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್ ಅವರು ನೀಡಿದ್ದ ಹೇಳಿಕೆಗೆ ಸೋಮವಾರ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್‌ ಜಿಯಾನ್‌, ಅರುಣಾಚಲ ಪ್ರದೇಶ ತಮ್ಮ ದೇಶಕ್ಕೇ ಸೇರಿದ್ದು ಎಂದು ಪುನರುಚ್ಚರಿಸಿದರು.

             ' ಚೀನಾದ ಹೇಳಿಕೆಯಲ್ಲಿ ಹೊಸದೇನಿಲ್ಲ. ಇದು ನಿರೀಕ್ಷಿತ ಪ್ರತಿಪಾದನೆ ಮತ್ತು ಅದು ಇಂದಿಗೂ ಹಾಸ್ಯಾಸ್ಪದವೇ ಆಗಿದೆ' ಎಂದು ಸಿಂಗಪುರದ ಪ್ರತಿಷ್ಠಿತ ದಕ್ಷಿಣ ಏಷ್ಯಾ ಅಧ್ಯಯನ ಸಂಸ್ಥೆ (ಐಎಸ್‌ಎಎಸ್‌) ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಜೈಶಂಕರ್ ಹೇಳಿದ್ದರು.

               ಸುದ್ದಿಗೋಷ್ಠಿಯಲ್ಲಿ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಲಿನ್‌ ಅವರು, 'ಭಾರತ ಮತ್ತು ಚೀನಾ ನಡುವಿನ ಗಡಿ ಸಮಸ್ಯೆ ಎಂದಿಗೂ ಬಗೆಹರಿಯುವುದಿಲ್ಲ. ಗಡಿ ಭಾಗದಲ್ಲಿ ಚೀನಾ ಅತ್ಯುತ್ತಮ ಆಡಳಿತವನ್ನು ಹೊಂದಿದೆ' ಎಂದು ಹೇಳಿದರು.

              'ಜಂಗ್ನಂ ಎಂಬುದು ಅರುಣಾಚಲ ಪ್ರದೇಶದ ಚೀನಾದ ಅಧಿಕೃತ ಹೆಸರಾಗಿದೆ. ಅದು ಎಂದಿಗೂ ಚೀನಾದ ಭಾಗವೇ ಆಗಿರುತ್ತದೆ. ಭಾರತ ಅದನ್ನು ನಿಯಮಬಾಹಿರವಾಗಿ ಆಕ್ರಮಿಸಿಕೊಂಡಿದೆ' ಎಂದು ಲಿನ್ ಹೇಳಿದರು.

                  ಅರುಣಾಚಲ ಪ್ರದೇಶದ ಮೇಲೆ ತನ್ನ ಹಕ್ಕು ಪ್ರತಿಪಾದಿಸಿ ಚೀನಾ ಇದೇ ತಿಂಗಳಲ್ಲಿ ನಾಲ್ಕನೇ ಬಾರಿಗೆ ಹೇಳಿಕೆ ನೀಡಿದಂತಾಗಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries