ನವದೆಹಲಿ: ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ನಾಯಕ ಪಶುಪತಿ ಪಾರಸ್ ಅವರು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಆಹಾರ ಸಂಸ್ಕರಣ ಖಾತೆಯನ್ನು ಕೇಂದ್ರ ಭೂವಿಜ್ಞಾನ ಸಚಿವ ಕಿರಣ್ ರಿಜಿಜು ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ.
0
samarasasudhi
ಮಾರ್ಚ್ 20, 2024
ನವದೆಹಲಿ: ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷದ ನಾಯಕ ಪಶುಪತಿ ಪಾರಸ್ ಅವರು ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದ ಬಳಿಕ ತೆರವಾಗಿದ್ದ ಆಹಾರ ಸಂಸ್ಕರಣ ಖಾತೆಯನ್ನು ಕೇಂದ್ರ ಭೂವಿಜ್ಞಾನ ಸಚಿವ ಕಿರಣ್ ರಿಜಿಜು ಅವರಿಗೆ ಹೆಚ್ಚುವರಿಯಾಗಿ ವಹಿಸಲಾಗಿದೆ.
ಈ ಬಗ್ಗೆ ರಾಷ್ಟ್ರಪತಿ ಭವನ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಕಿರಣ್ ರಿಜಿಜು ಅವರು ಸದ್ಯ ಕೇಂದ್ರ ಭೂವಿಜ್ಞಾನ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಇದರ ಜೊತೆಗೆ ಆಹಾರ ಸಂಸ್ಕರಣ ಉದ್ಯಮಗಳ ರಾಜ್ಯ ಖಾತೆಯನ್ನು ಅವರು ನಿರ್ವಹಣೆ ಮಾಡಲಿದ್ದಾರೆ.
ಪಶುಪತಿ ಪಾರಸ್ ನೇತೃತ್ವದ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷವು ಮಂಗಳವಾರ ಎನ್‌ಡಿಎ ಬಣವನ್ನು ತೊರೆದಿದ್ದು, ಪಾರಸ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಲೋಕಸಭೆ ಚುನಾವಣೆಗೆ ಬಿಹಾರದಲ್ಲಿ ಸೀಟು ಹಂಚಿಕೆ ವೇಳೆ ಬಿಜೆಪಿಯು ಪಶುಪತಿ ಅವರನ್ನು ಕಡೆಗಣಿಸಿ, ಅವರ ಅಣ್ಣನ ಮಗ ಚಿರಾಗ್ ಪಾಸ್ವಾನ್ ನೇತೃತ್ವದ ಪಕ್ಷಕ್ಕೆ ಮಣೆ ಹಾಕಿತ್ತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ರಾಜೀನಾಮೆ ನೀಡಿದ್ದಾರೆ.