HEALTH TIPS

ಕಲಾಮಂಡಲ ಗೋಪಿ ಆಶಾನ್ ಗುರು ಸಮಾನ: ಗೋಪಿ ಅವರನ್ನು ಕರೆಯಲು ಯಾರನ್ನೂ ನಿಯೋಜಿಸಿಲ್ಲ: ಸುರೇಶ್ ಗೋಪಿ

                ತ್ರಿಶೂರ್: ಕಥಕ್ಕಳಿಯ ಯುಗಪುರುಷ ಕಲಾಮಂಡಲಂ ಗೋಪಿ ಅವರ ಪುತ್ರನ ಫೇಸ್ ಬುಕ್ ಪೋಸ್ಟ್ ನಿನ್ನೆ ಚರ್ಚೆಗೀಡಾಗಿದ್ದು ತ್ರಿಶೂರ್ ಬಿಜೆಪಿ ಅಭ್ಯರ್ಥಿ ಸುರೇಶ್ ಗೋಪಿ ಪ್ರತಿಕ್ರಿಯೆ ನೀಡಿದ್ದಾರೆ.

                  ಕಲಾಮಂಡಲಂ ಗೋಪಿ ಅವರಿಂದ ಆಶೀರ್ವಾದ ಪಡೆಯಲು ತಾನು ಯಾರನ್ನೂ ನಿಯೋಜಿಸಿಲ್ಲ. ಗೋಪಿಯವರ ಪುತ್ನ ಪೋಸ್ಟ್‍ನಲ್ಲಿ ಹೇಳಿದ್ದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸುರೇಶ್ ಗೋಪಿ ಹೇಳಿರುವರು. ಪಕ್ಷದ ತೀರ್ಮಾನದಂತೆ ಪ್ರಮುಖ ವ್ಯಕ್ತಿಗಳನ್ನು ಭೇಟಿಯಾಗಿ ಆಶೀರ್ವಾದ ಪಡೆಯಲಾಗುತ್ತದೆ. ಗೋಪಿ ಆಶಾನ್ ಅವರನ್ನು ಕರೆಯಲು ಯಾರನ್ನೂ ನೇಮಿಸಿಲ್ಲ ಎಂದರು.

              ಯಾರನ್ನಾದರೂ ಭೇಟಿ ಮಾಡುವ ವಿಷಯದಲ್ಲಿ ಯಾರಿಗೂ ಒಪ್ಪಿಸಲಾಗಿಲ್ಲ. ಆ ಬಗ್ಗೆ ಜವಾಬ್ದಾರಿ ನೀಡುವ ಉದ್ದೇಶವಿಲ್ಲ. ವೈಯಕ್ತಿಕವಾಗಿ ಗೋಪಿಯಾಶನ್ ಬಗ್ಗೆ ನಿಕಟತೆ ಇದೆ.  ಈ ಹಿಂದೆ ಮನೆಯಲ್ಲಿ ಭೇಟಿಯಾಗಿದ್ದೆ. ಗುರುಗಳನ್ನು ಕಂಡಾಗಲೆಲ್ಲ ಕಾಲುಮುಟ್ಟಿ ನಮಸ್ಕರಿಸುವೆ.  ಇನ್ನೂ ಅದನ್ನು ಮುಂದುವರಿಸುವೆ. 

                ಪಕ್ಷದ ಜಿಲ್ಲಾಧ್ಯಕ್ಷರಿಗೆ ಹೇಳುತ್ತೇನೆ, ಅದು ಸಾಧ್ಯವಿಲ್ಲ ಎಂದು ಹೇಳಿದರೆ, ನಾನು ನೇರವಾಗಿ ಎಲ್ಲಾ ಗುರುಗಳ ಗುರುಗಳಾದ ಗುರುವಾಯೂರಪ್ಪ ಪದತಲದಲ್ಲಿ ತಲೆಯಿರಿಸಿ ಇದು   ಗೋಪಿಯಾಶಾನ್ ಗೆ ಎಂದು ಪ್ರಾರ್ಥಿಸುತ್ತೇನೆ ಎಂದು ಸುರೇಶ್ ಗೋಪಿ ಮಾಧ್ಯಮಗಳಿಗೆ ತಿಳಿಸಿದರು.

               ಕಲಾಮಂಡಲಂ ಗೋಪಿ ಅವರ ಪುತ್ರ ರಘು ಗುರುಕೃಪಾ ಅವರ ಪೋಸ್ಟ್‍ನಲ್ಲಿ ಸುರೇಶ್ ಗೋಪಿ ಅವರ ಸಲುವಾಗಿ ಅನೇಕ ವಿಐಪಿಗಳು  ತಂದೆಯವರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ಇದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಮತ್ತು ಬಳಿಕ ಅಳಿಸಲಾಗಿದೆ. 'ಈ ಗೋಪಿ ಆ ಗೋಪಿಯಲ್ಲ ಎಂಬುದನ್ನು ಮಾತ್ರ ಅರ್ಥಮಾಡಿಕೊಳ್ಳಿ. ನಿಮ್ಮಲ್ಲಿರುವ ಪ್ರೀತಿ ಮತ್ತು ಗೌರವವನ್ನು ಯಾವುದಕ್ಕೂ ಕಳೆದುಕೊಳ್ಳಬೇಡಿ. ಈ ಕಾರಣಕ್ಕಾಗಿಯೇ ಅನೇಕರು ಪ್ರೀತಿಸುವಂತೆ ನಟಿಸುತ್ತಿರುವಿರಿ ಎಂದು ಇಂದು ನಾನು ಅರಿತುಕೊಂಡೆ ಎಂದು ರಘು ಗುರುಕೃಪಾ ಬರೆದಿದ್ದರು. 

               ಸುರೇಶ್ ಗೋಪಿ ಪರ ಕರೆ ಮಾಡಿದ್ದ ಮಧ್ಯವರ್ತಿ ವೈದ್ಯರೊಬ್ಬರು ಆಶಾನ್ ಅವರಿಗೆ ಪದ್ಮಭೂಷಣ ಬೇಡವೇ?.ಎಂದು ಕೇಳಿದ್ದು, ನನಗೆ ಬೇಡ ಎಂದು ಅಪ್ಪ ಉತ್ತರಿಸಿದರು ಎಂದು ರಘು ಹೇಳಿದ್ದರು. ಬಿಜೆಪಿ ಮತ್ತು ಕಾಂಗ್ರೆಸ್ ಗಾಗಿ ಇನ್ನೂ ಯಾರೂ ಈ ಮನೆಗೆ ಬಂದು ಸಹಾಯ ಮಾಡಬಾರದು. ಇದೊಂದು ನಮ್ಮ ಅಪೇಕ್ಷೆ ಎಂದು ಬರೆದು ರಘು ಅವರ ಪೋಸ್ಟ್ ಮುಕ್ತಾಯಗೊಂಡಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries