ಇಸ್ಲಾಮಾಬಾದ್: ಚಾರಿತ್ರಿಕ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಜರ್ದಾರಿ ಅವರು ತಮ್ಮ 31 ವರ್ಷದ ಮಗಳು ಆಸೀಫಾ ಭುಟ್ಟೊ ಅವರನ್ನು ರಾಷ್ಟ್ರದ ಪ್ರಥಮ ಮಹಿಳೆಯನ್ನಾಗಿ ಘೋಷಿಸಲಾಗಿದೆ.
ಪಾಕಿಸ್ತಾನ: ಅಧ್ಯಕ್ಷರ ಮಗಳು ಆಸೀಫಾ ಭುಟ್ಟೊಗೆ 'ಪ್ರಥಮ ಮಹಿಳೆ' ಪಟ್ಟ
0
ಮಾರ್ಚ್ 12, 2024
Tags
0
samarasasudhi
ಮಾರ್ಚ್ 12, 2024
ಇಸ್ಲಾಮಾಬಾದ್: ಚಾರಿತ್ರಿಕ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಜರ್ದಾರಿ ಅವರು ತಮ್ಮ 31 ವರ್ಷದ ಮಗಳು ಆಸೀಫಾ ಭುಟ್ಟೊ ಅವರನ್ನು ರಾಷ್ಟ್ರದ ಪ್ರಥಮ ಮಹಿಳೆಯನ್ನಾಗಿ ಘೋಷಿಸಲಾಗಿದೆ.
ರಾಷ್ಟ್ರದ ಅಧ್ಯಕ್ಷರ ಪತ್ನಿಗೆ ಪ್ರಥಮ ಮಹಿಳೆಯ ಸ್ಥಾನಮಾನ ನೀಡುವುದು ವಾಡಿಕೆ.
ಆಸೀಫಾ ಅವರನ್ನು ರಾಷ್ಟ್ರದ ಪ್ರಥಮ ಮಹಿಳೆ ಸ್ಥಾನಕ್ಕೆ ಆಯ್ದೆ ಮಾಡಿರುವುದು ಪಾಕಿಸ್ತಾನದ ರಾಜಕೀಯ ಚರಿತ್ರೆಯಲ್ಲಿ ಮಹತ್ವದ ಅಧ್ಯಾಯವಾಗಿದೆ ಎಂದು ಎಆರ್‌ವೈ ನ್ಯೂಸ್ ವರದಿ ಮಾಡಿದೆ.
ವಿಧುರನಾಗಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಆಂಡ್ರ್ಯೂ ಜಾಕ್ಸನ್ ದೇಶದ ಪ್ರಥಮ ಮಹಿಳೆಯಾಗಿ ಕಾರ್ಯನಿರ್ವಹಿಸುವಂತೆ ತಮ್ಮ ಸೊಸೆ ಎಮಿಲಿ ಡೊನೆಲ್ಸನ್ ಅವರನ್ನು ಕೇಳಿಕೊಂಡಿದ್ದರು. ಅಮೆರಿಕದ ಮತ್ತಿಬ್ಬರು ರಾಷ್ಟ್ರಾಧ್ಯಕ್ಷರಾದ ಚೆಸ್ಟರ್ ಆರ್ಥರ್ ಮತ್ತು ಗ್ರೋವರ್ ಕ್ಲೀವ್‌ಲ್ಯಾಂಡ್ ರಾಷ್ಟ್ರದ ಪ್ರಥಮ ಮಹಿಳೆಯಾಗುವಂತೆ ತಮ್ಮ ಸಹೋದರಿಯರನ್ನು ಕೋರಿದ್ದರು.