HEALTH TIPS

ಸಾವಿಗೀಡಾಗುವ ಔಷಧ ಸೇವಿಸಲು ಅವಕಾಶ ಕಲ್ಪಿಸುವ ಕಾನೂನು: ಮ್ಯಾಕ್ರಾನ್‌

             ಪ್ಯಾರಿಸ್‌: ಗುಣಮುಖವಾಗದ ಕಾಯಿಲೆಗಳಿಂದ ಬಳಲುತ್ತಿರುವವರು ಸಾವಿಗೀಡಾಗುವ ಔಷಧ ಸೇವಿಸಲು ಅವಕಾಶ ಕಲ್ಪಿಸುವ ಕಾನೂನು ಜಾರಿಗೊಳಿಸುವುದಾಗಿ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್‌ ಮ್ಯಾಕ್ರಾನ್‌ ಅವರು ಘೋಷಿಸಿದ್ದಾರೆ.

               ಮಾರಣಾಂತಿಕ ರೋಗದಿಂದ ಬಳಲುತ್ತಿರುವ ವಯಸ್ಕರಿಗೆ ಈ ಕಾನೂನಿನಿಂದ ಪ್ರಯೋಜನವಾಗಲಿದೆ ಎಂದು ಮೂಲಗಳು ಹೇಳಿವೆ.

              ಗುಣಪಡಿಸಲಾಗದ ಕಾಯಿಲೆಗೆ ಒಳಗಾಗಿ ದೈಹಿವಾಗಿ ಮತ್ತು ಮಾನಸಿಕವಾಗಿ ನೋವನ್ನು ಅನುಭವಿಸುವ ವಯಸ್ಕರಿಗೆ ಈ ಹೊಸ ಕಾನೂನು ಸೀಮಿತವಾಗಲಿದೆ ಎಂದು 'ಲಾ ಕ್ರೊಯಿಕ್ಸ್' ಮತ್ತು 'ಲಿಬರೇಶನ್' ಪತ್ರಿಕೆಗಳಿಗೆ ನೀಡಿರುವ ಸಂದರ್ಶನದಲ್ಲಿ ಮ್ಯಾಕ್ರಾನ್‌ ಹೇಳಿದ್ದಾರೆ.

              ನಿಖರವಾದ ಮಾನದಂಡಗಳಿಗೆ ಅನುಗುಣವಾಗಿ ಕೈಗೊಳ್ಳುವ ವೈದ್ಯಕೀಯ ನಿರ್ಧಾರಗಳಿಗೆ ಈ ಕಾನೂನಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.

              ಕ್ಯಾನ್ಸರ್‌ ರೋಗದ ಕೊನೆಯ ಹಂತದಲ್ಲಿರುವ ರೋಗಿಗಳಿಗೆ ಇದರ ಪ್ರಯೋಜನ ಪಡೆಯಬಹುದು ಎಂದು ಅವರು ಉದಾಹರಣೆ ನೀಡಿದ್ದಾರೆ.

             18 ಮತ್ತು ಅದಕ್ಕಿಂತ ಅಧಿಕ ವಯಸ್ಸಿನ ಸ್ವಯಂ ತೀರ್ಮಾನ ತೆಗೆದುಕೊಳ್ಳಲು ಪ್ರಾಪ್ತರಾಗಿರುವವರಿಗೆ ಈ ಕಾನೂನಿನ ಪ್ರಯೋಜನ ಪಡೆಯಬಹುದು. ತೀವ್ರ ಮಾನಸಿಕ ಕಾಯಿಲೆ, ಆಲ್‌ಝೈಮರ್‌ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರು ಈ ಕಾನೂನಿಗೆ ಅರ್ಹರಲ್ಲ ಎಂದು ಮ್ಯಾಕ್ರಾನ್‌ ಅವರು ವಿವರಿಸಿದ್ದಾರೆ.

               ಯಾವ ದಿನಾಂಕದಿಂದ ಇದು ಜಾರಿಯಾಗಲಿದೆ ಎಂಬುದನ್ನು ಮ್ಯಾಕ್ರಾನ್‌ ಅವರು ಸ್ಪಷ್ಟಪಡಿಸಿಲ್ಲ. ಕಾನೂನು ಜಾರಿಗೂ ಮುನ್ನ ತಿಂಗಳುಗಳ ಕಾಲ ಶಾಸಕಾಂಗ ಪ್ರಕ್ರಿಯೆಗಳು ನಡೆಯಲಿವೆ. ಈ ಪ್ರಕ್ರಿಯೆ ಮೇ ತಿಂಗಳಲ್ಲಿ ಆರಂಭವಾಗಲಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries