HEALTH TIPS

ವೀಡಿಯೊ ಎಡಿಟಿಂಗ್ ಕೋರ್ಸ್‍ಗೆ ಅರ್ಜಿ ಆಹ್ವಾನ

                     ಕಾಸರಗೋಡು: ಸರ್ಕಾರದ ಸ್ಥಳೀಯಾಡಳಿತ ಸಂಸ್ಥೆಯಾದ ಕೇರಳ ಮೀಡಿಯಾ ಅಕಾಡೆಮಿಯ ಕೊಚ್ಚಿ ಕೇಂದ್ರದಲ್ಲಿ ಮೇ ತಿಂಗಳಲ್ಲಿ ಪ್ರಾರಂಭವಾಗುವ ವೀಡಿಯೊ ಎಡಿಟಿಂಗ್ ಸರ್ಟಿಫಿಕೇಟ್ ಕೋರ್ಸ್‍ಗೆ ಅರ್ಜಿ ಆಹ್ವಾನಿಸಲಾಗಿದೆ.  ಸಿದ್ಧಾಂತ ಮತ್ತು ಪ್ರಾಯೋಗಿಕ ತರಗತಿ ಸೇರಿ ಕೋರ್ಸ್‍ನ ಅವಧಿ 6 ತಿಂಗಳಾಗಿದ್ದು,  30 ಜನರಿಗೆ ಮಾತ್ರ ಕೋರ್ಸಿಗೆ ಪ್ರವೇಶ ಸೀಮಿತವಾಗಿದೆ.

               ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದಲ್ಲಿ ಪ್ರವೇಶ ನಡೆಯಲಿದ್ದು,  ಸುಧಾರಿತ ಸಾಫ್ಟ್‍ವೇರ್‍ನಲ್ಲಿ ತರಬೇತಿ ನೀಡಲಾಗುವುದು.  ಕೋರ್ಸ್‍ನ ಅಂಗವಾಗಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತದೆ. ಸರ್ಕಾರದ  ಅಂಗೀಕೃತ ಕೋರ್ಸ್‍ಗೆ 34,500 ರೂ ಶುಲ್ಕ ನಿಗದಿಪಡಿಸಲಾಗಿದೆ.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಓಈ ಸಿ ವಿದ್ಯಾರ್ಥಿಗಳಿಗೆ  ನಿಯಮಬದ್ಧವಾದ ವಿನಾಯಿತಿ ಲಭಿಸಲಿದೆ.  ಪ್ಲಸ್ ಟು ಶೈಕ್ಷಣಿಕ ಅರ್ಹತೆ ಹೊಂದಿರುವವರಿಗೆ ವೆಬ್‍ಸೈಟ್ ಮೂಲಕ ಆನ್‍ಲೈನ್ ನಲ್ಲಿ  ಅರ್ಜಿಯನ್ನು ಸಲ್ಲಿಸಬಹುದಾಗಿದೆ. (www.keralamediaacademy.org) ಅರ್ಜಿ ಶುಲ್ಕ ರೂ.300 (ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಒಇಸಿ ವಿಭಾಗಗಳಿಗೆ ರೂ. 150) ಇ-ವರ್ಗಾವಣೆ, ಬ್ಯಾಂಕ್ ಮೂಲಕ ಪಾವತಿಸಿದ ಸ್ಟೇಟ್‍ಮೆಂಟ್ ಮತ್ತು ಪ್ರಮಾಣಪತ್ರಗಳ ಪ್ರತಿಯನ್ನು ಅರ್ಜಿಯೊಂದಿಗೆ ಅಪ್‍ಲೋಡ್ ಮಾಡಬೇಕಾಗಿದೆ.  ಅರ್ಜಿಯನ್ನು ಸ್ವೀಕರಿಸುವ ಕೊನೆಯ ದಿನಾಂಕ ಏಪ್ರಿಲ್ 25 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ(0484 2422275, 9447607073)ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries