HEALTH TIPS

ದಂಪತಿ ಸೋಗಿನಲ್ಲಿ ಕೊಠಡಿ ಪಡೆದು ಗಾಂಜಾ ಮಾರಾಟ-ಅನ್ಯರಾಜ್ಯದ ಜೋಡಿಯ ಬಂಧನ

         ಕಾಸರಗೋಡು: ದಂಪತಿ ಸೋಗಿನಲ್ಲಿ ಕ್ವಾಟ್ರಸ್ ಬಾಡಿಗೆಗೆ ಪಡೆದು,  ಅಲ್ಲಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಜೋಡಿಯನ್ನು ತಳಿಪರಂಬ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಮ ನಿವಾಸಿ ಮೊನೂರ ಬೀಗಂ(20)ಹಾಗೂ ಉತ್ತರ ಪ್ರದೇಶ ಸಿಬಾರ್ವ ನಗರ ನಿವಸಿ ಅಬ್ದುಲ್ ರಹಮಾನ್ ಅನ್ಸಾರಿ(21)ಬಂಧಿತರು. ಇವರ ವಶದಲ್ಲಿದ್ದ 1.200ಕಿ.ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

        ದಂಪತಿಯೆಂದು ತಿಳಿಸಿ ಪರಂಬತ್ ಎಂಬಲ್ಲಿನ ಕ್ವಾಟ್ರಸ್ ಒಂದರಲ್ಲಿ ಕೊಠಡಿ ಪಡೆದು ಕೆಲ ಸಮಯದಿಂದ ವಾಸಿಸುತ್ತಿದ್ದರು. ರಾತ್ರಿ ವೇಳೆ ಅಪರಿಚಿತರು ಇವರ ಕೊಠಡಿಗೆ ಬರುತ್ತಿರುವ ಬಗ್ಗೆ ಸಂಶಯಗೊಂಡ ಸ್ಥಳೀಯರು ನೀಡಿದ ಮಾಹಿತಿಯನ್ವಯ ಪೊಲೀಸರು ಮಾದಕ ವಸ್ತು ವಿರುದ್ಧ ದಳದ ಸಹಕಾರದೊಂದಿಗೆ ದಾಳಿ ನಡೆಸಿ ಇವರನ್ನು ಬಂಧಿಸಿದ್ದರು.

              ಅನ್ಯ ರಾಜ್ಯದಿಂದ ಆಗಮಿಸಿ ಯಾವುದೇ ಸಂಶಯ ಬಾರದ ರೀತಿಯಲ್ಲಿ ಕೊಠಡಿ ಪಡೆದಿದ್ದ ಜೋಡಿ, ಭಾರಿ ಪ್ರಮಾಣದಲ್ಲಿ ಮಾದಕ ದ್ರವ್ಯ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರೆನ್ನಲಾಗಿದೆ. ಕೇರಳ ರಾಜ್ಯಾದ್ಯಂತ ಇತರ ರಾಜ್ಯಗಳ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಿದ್ದು, ಇವರಲ್ಲಿ ಬಹುತೇಕ ಮಂದಿ ಸೂಕ್ತ ದಾಖಲೆಗಳನ್ನೂ ಸಲ್ಲಿಸದೆ, ಕೊಠಡಿ ಪಡೆಯುತ್ತಿರುವುದಾಗಿ ದೂರುಗಳಿವೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries