HEALTH TIPS

ತೀವ್ರ ತಾಪದ ಮಧ್ಯೆ ಬರಿಗಾಲಲ್ಲಿ ಶಬರಿಮಲೆಗೆ ಕಾಲ್ನಡಿಗೆ ಯಾತಯ್ರೆ ಕೈಗೊಂಡ ಶಿವಮೊಗ್ಗದ ಭಕ್ತರು

                   ಎರುಮೇಲಿ: ಸುಡುಬಿsಸಿಲಿನ ತಾಪದ ಮಧ್ಯೆ ಕರ್ನಾಟಕ ಮೂಲದ ಅಯ್ಯಪ್ಪ ಭಕ್ತರು ಬರಿಗಾಲಲ್ಲಿ ಕಾಲ್ನಡಿಗೆ ಮೂಲಕ ಶಬರಿಮಲೆ ಸನ್ನಿಧಿಗೆ ಆಗಮಿಸಿದ್ದಾರೆ. ಕರ್ನಾಟಕದ ಶಿವಮೊಗ್ಗ ಜಿಲ್ಲೆಯಿಂದ ಕಾಲ್ನಡಿಗೆಯಲ್ಲಿ ಸಾಗಿ ವಿಷು ದರ್ಶನಕ್ಕಾಗಿ ಶಬರಿಮಲೆಗೆ ಆಗಮಿಸಿದರು. ಸೋಮಶೇಖರ್ (50) ಮತ್ತು ಲೋಕೇಶ್ (45) 25 ದಿನಗಳಲ್ಲಿ ಕ್ರಮಿಸಿ ಆಗಮಿಸಿದ್ದಾರೆ. 

                  ಮಾರ್ಚ್ 15 ರಂದು 8 ಮಂದಿ ಯಾತ್ರಿಕರ ಗುಂಪು ಕಾಲ್ನಡಿಗೆಯಲ್ಲಿ ಪ್ರಯಾಣವನ್ನು ಪ್ರಾರಂಭಿಸಿತು. 25 ದಿನಗಳಲ್ಲಿ ಎರುಮೇಲಿ ತಲುಪಿರುವರು. ಅವರ ಹಿಂದೆ ಆರು ಜನರ ಗುಂಪು ಆಗಮಿಸುತ್ತಿದೆ. ಅವರೆಲ್ಲ ಪಂಬಾದಲ್ಲಿ ಒಟ್ಟಾಗುವುದಾಗಿ ಒಪ್ಪಂದವಿದೆ. ದಾರಿಯಲ್ಲಿರುವ ವಿವಿಧ ದೇವಸ್ಥಾನಗಳಲ್ಲಿ ರಾತ್ರಿ ತಂಗಿದ್ದಾರೆ. 

                ವಿವಿಧ ದೇವಾಲಯಗಳಿಂದ ಆಹಾರವೂ ಲಭ್ಯವಾಗಿದೆ ಎಂದಿರುವರು. ಬಿರು ಬಿಸಿಲಿರುವ ಕಾಲವಾದ್ದರಿಂದ ಬೆಳಗ್ಗೆ ಮತ್ತು ಸಂಜೆ ನಡೆದು ಆಗಮಿಸಿದ್ದಾರೆ. ಅವರು ಇದೇ ಮೊದಲು ಶಬರಿಮಲೆಗೆ ಕಾಲ್ನಡೆ ಯಾತ್ರೆ ಕೈಗೊಂಡಿದ್ದಾರೆ. ಈ ಹಿಂದೆ ಎರುಮೇಲಿಯಿಂದ ಶಬರಿಮಲೆಗೆ ಕಾಲ್ನಡಿಗೆಯಲ್ಲಿ ಸಂಚರಿಸಿದ್ದರು ಎಂದಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries