HEALTH TIPS

ಗಣಪತಿವಟ್ಟಂ: ಇಎಂಎಸ್ ಇದ್ದಾಗ ಕೆ.ಜಿ.ಮಾರಾರ್ ವಿಷಯ ಪ್ರಸ್ತಾಪಿಸಿದ್ದರು ಎಂದು ಸಿಪಿಎಂ ಮುಖಂಡ ಸಿ.ಕೆ.ಶಶೀಂದ್ರನ್

                  ಸುಲ್ತಾನ್ ಬತ್ತೇರಿ: ಸುಲ್ತಾನ್ ಬತ್ತೇರಿಯನ್ನು ಗಣಪತಿವಟ್ಟಂ ಎಂದು ಬದಲಾಯಿಸಬೇಕೆಂಬ ಬೇಡಿಕೆ ಈ ಹಿಂದೆಯೇ ಕೇಳಿ ಬಂದಿದೆ ಎಂದು ಸಿಪಿಎಂ ಮುಖಂಡ ಹಾಗೂ ಮಾಜಿ ಶಾಸಕ ಸಿ.ಕೆ.ಶಶೀಂದ್ರನ್ ಹೇಳಿರುವರು. 

                 ಕೆ.ಜಿ.ಮಾರಾರ್ ಅವರು ಬಿಜೆಪಿ ರಾಜ್ಯ ಅಧ್ಯಕ್ಷರಾಗಿದ್ದಾಗ ಸಾರ್ವಜನಿಕವಾಗಿ ಈ ಬಗ್ಗೆ ಹೇಳಿದ್ದರು. ಆಗ ಮುಖ್ಯಮಂತ್ರಿಯಾಗಿದ್ದ ಇಎಂಎಸ್ ಕೂಡ ಅದಕ್ಕೆ ಉತ್ತರ ನೀಡಿದ್ದರು ಎಂದು ಸಿ.ಪಿ.ಎಂ. ರಾಜ್ಯ ಸಮಿತಿ ಸದಸ್ಯ ಸಿ.ಕೆ. ಶಶೀಂದ್ರನ್ ಹೇಳಿರುವರು. ಇದು ವರ್ಷಗಳಿಂದ ಇರುವ ಸಮಸ್ಯೆ ಎಂಬ ಬಿಜೆಪಿ ನಿಲುವನ್ನು ಸಿಪಿಎಂ ನಾಯಕರ ವಿವರಣೆ ಸಮರ್ಥಿಸುತ್ತದೆ.

                ವಯನಾಡಿನ ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರು ಚುನಾವಣೆಯಲ್ಲಿ ವಿಜೇತರಾದರೆ ಸುಲ್ತಾನ್ ಬತ್ತೇರಿ ಹೆಸರನ್ನು ಗಣಪತಿವಟ್ಟಂ ಎಂದು ಬದಲಾಯಿಸುವುದಾಗಿ ರಾಷ್ಟ್ರೀಯ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸುರೇಂದ್ರನ್ ಅವರನ್ನು ಟೀಕಿಸಲು ಎಲ್ ಡಿಎಫ್ ಮತ್ತು ಯುಡಿಎಫ್ ಮುಂದಾದವು. ಸುಲ್ತಾನ್ ಬತ್ತೇರಿ ಎಂಬ ಹೆಸರು ವಿದೇಶಿ ಪ್ರಾಬಲ್ಯದ ಭಾಗವಾಗಿ ಬಂದಿದ್ದು, ಹೆಸರು ಬದಲಾವಣೆ ಅನಿವಾರ್ಯ ಎಂದು ಸುರೇಂದ್ರನ್ ಪುನರುಚ್ಚರಿಸಿದರು.

               ಸುಲ್ತಾನನ ಬತ್ತೇರಿ ಗಣೇಶವಟ್ಟಂ ಅಲ್ಲವೇ. ಇದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ಕೆ ಸುರೇಂದ್ರನ್ ಪ್ರಶ್ನಿಸಿದ್ದಾರೆ. ಟಿಪ್ಪು ಸುಲ್ತಾನನ ಆಕ್ರಮಣ ನಡೆದು ಎಷ್ಟು ದಿನಗಳಾಗಿವೆ? ಅದಕ್ಕೂ ಮೊದಲು ಯಾವ ಹೆಸರಿತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕೆ ಸುರೇಂದ್ರನ್ ಹೇಳಿದರು. ಸುಲ್ತಾನ್ ಬತ್ತೇರಿ ಎಂಬ ಹೆಸರು ವಿದೇಶಿ ಪ್ರಾಬಲ್ಯದ ಭಾಗವಾಗಿ ಬಂದಿತು.

            ಈ ವಿಷಯವನ್ನು 1984ರಲ್ಲಿ ಪ್ರಮೋದ್ ಮಹಾಜನ್ ಪ್ರಸ್ತಾಪಿಸಿದ್ದರು ಎಂದು ಸುರೇಂದ್ರನ್ ಹೇಳಿದ್ದಾರೆ. ಟಿಪ್ಪು ಸುಲ್ತಾನ್ ಬರುವ ಮೊದಲು ಅಂತಹ ಸ್ಥಳ ಇರಲಿಲ್ಲವೇ? ಕಾಂಗ್ರೆಸ್ ಮತ್ತು ಎಲ್‍ಡಿಎಫ್ ಇದನ್ನು ಸುಲ್ತಾನ್ ಬತ್ತೇರಿ ಎಂದೇ ಕರೆಯಲು ಬಯಸುತ್ತವೆ. ಆಕ್ರಮಣಕಾರರನ್ನು ನೆನಪಿಸುವ ಅಂತಹ ಹೆಸರು ಇನ್ಯಾಕೆ ಎಂದು ಕೆ ಸುರೇಂದ್ರನ್ ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries