HEALTH TIPS

ವಿವಿ-ಪ್ಯಾಟ್‌ನಲ್ಲೂ ಮೈಕ್ರೊಕಂಟ್ರೋಲರ್‌: ಚುನಾವಣಾ ಆಯೋಗ

           ತಎಣಿಕೆ ವೇಳೆ ಇವಿಎಂಗಳಲ್ಲಿನ ಮತಗಳು ಮತ್ತು ವಿವಿ-ಪ್ಯಾಟ್‌ನಲ್ಲಿನ ಮತಗಳನ್ನು ಪರಸ್ಪರ ಹೋಲಿಸಿ ನೋಡಬೇಕು ಎಂದು ಕೋರಿದ್ದ ಅರ್ಜಿಗಳ ವಿಚಾರಣೆಯನ್ನು ಏಪ್ರಿಲ್‌ 18ರಂದೇ ಪೂರ್ಣಗೊಳಿಸಿದ್ದ ಸುಪ್ರೀಂ ಕೋರ್ಟ್‌ ಪೀಠವು, ತೀರ್ಪನ್ನು ಕಾಯ್ದಿರಿಸಿತ್ತು. ಆದರೆ, ಈ ಸಂಬಂಧ ಚುನಾವಣಾ ಆಯೋಗವು ನೀಡಿದ್ದ ವಿವರಣೆಯಲ್ಲಿ ಹಲವು ಕೊರತೆಗಳು ಇದ್ದ ಕಾರಣ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ , ದೀಪಂಕರ್ ದತ್ತಾ ಅವರಿದ್ದ ಪೀಠವು ಬುಧವಾರ ಮತ್ತೆ ವಿಚಾರಣೆ ನಡೆಸಿತು.

             ಅಂದರೆ ಆಯೋಗವು ಸುಪ್ರೀಂ ಕೋರ್ಟ್‌ಗೆ ಈ ಹಿಂದೆ ಪೂರ್ಣ ಮಾಹಿತಿ ನೀಡಿರಲಿಲ್ಲ. ಅರೆಮಾಹಿತಿಯ ಆಧಾರದಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ ಎಂದೇ ಪೀಠವು ಹೇಳಿತ್ತು.

                ವಿವಿ-ಪ್ಯಾಟ್‌ನಲ್ಲಿ 4 ಎಂಬಿಯಷ್ಟು ಫ್ಲ್ಯಾಷ್‌ ಮೆಮೊರಿ ಅಷ್ಟೇ ಇರುತ್ತದೆ ಎಂದು ಆಯೋಗ ಈ ಹಿಂದಿನ ವಿಚಾರಣೆ ವೇಳೆ ಹೇಳಿತ್ತು. ಈಗ ಪೀಠವು ಮರುಪ್ರಶ್ನಿಸಿದಾಗ, ವಿವಿ-ಪ್ಯಾಟ್‌ನಲ್ಲಿ ಮೈಕ್ರೊ ಕಂಟ್ರೋಲರ್‌ ಸಹ ಇರುತ್ತದೆ ಎಂದು ಹೇಳಿದೆ. ಈಗ ಎರಡನೇ ಬಾರಿಗೆ ವಿಚಾರಣೆ ಪೂರ್ಣಗೊಳಿಸಿರುವ ಪೀಠವು ತೀರ್ಪನ್ನು ಮತ್ತೆ ಕಾಯ್ದಿರಿಸಿದೆ.

           ಮೈಕ್ರೊಕಂಟ್ರೋಲರ್‌ ಅನ್ನು ಕಂಟ್ರೋಲ್‌ ಯೂನಿಟ್‌ನಲ್ಲಿ ಅಳವಡಿಸಲಾಗಿದೆಯೇ ಅಥವಾ ವಿವಿ-ಪ್ಯಾಟ್‌ನಲ್ಲಿ ಅಳವಡಿಸಲಾಗಿದೆಯೇ?

            ಕಂಟ್ರೋಲ್‌ ಯೂನಿಟ್‌, ಇವಿಎಂ ಹಾಗೂ ವಿವಿ-ಪ್ಯಾಟ್‌ ಮೂರರಲ್ಲಿಯೂ ಪ್ರತ್ಯೇಕ ಮೈಕ್ರೊಕಂಟ್ರೋಲರ್‌ ಅನ್ನು ಅಳವಡಿಸಲಾಗಿದೆ. ಇವುಗಳನ್ನು ಸುರಕ್ಷಿತವಾಗಿ ಇರಿಸಲಾಗಿರುತ್ತದೆ. ಒಂದು ವೇಳೆ ಇವುಗಳನ್ನು ಮುಟ್ಟಲು ಪ್ರಯತ್ನಿಸಿದರೆ, ಇವಿಎಂ ಯಂತ್ರವು ಹಾಳಾಗುತ್ತದೆ.

ಈ ಮೈಕ್ರೊ ಕಂಟ್ರೋಲರ್‌ ಗಳಲ್ಲಿ ಒಂದು ಬಾರಿಯಷ್ಟೇ ಪ್ರೋಗ್ರಾಂಮಿಂಗ್‌ ಮಾಡಲು ಸಾಧ್ಯವೇ?

ಹೌದು. ಈ ಮೂರು ಮೈಕ್ರೊಕಂಟ್ರೋಲರ್‌ ಗಳನ್ನು ಒಂದು ಬಾರಿಯಷ್ಟೇ ಪ್ರೋಗ್ರಾಮಿಂಗ್‌ ಮಾಡಲು ಸಾಧ್ಯ. ಈ ಪ್ರೋಗ್ರಾಂಗಳನ್ನು ಈ ಯಂತ್ರಗಳ ತಯಾರಿಕೆ ವೇಳೆಯಲ್ಲಿಯೇ ಅವಳಡಿಸಲಾಗುತ್ತದೆ. ಅದನ್ನು ಬದಲಿಸಲಾಗದು.

            ಮತಎಣಿಕೆ ಬಳಿಕ 30 ದಿನಗಳವರೆಗೆ ಮಾತ್ರ ತಕರಾರು ಅರ್ಜಿಗೆ ಅವಕಾಶ ಇದೆ. ಹೀಗಾಗಿ 45 ದಿನದ ವರೆಗೆ ಇವಿಎಂಗಳನ್ನು ಹಾಗೇ ಇರಿಸುತ್ತೇವೆ ಎಂದು ನೀವು ಹೇಳಿದ್ದೀರಿ. ಆದರೆ ಜನಪ್ರಾತಿನಿಧ್ಯ ಕಾಯ್ದೆ ಪ್ರಕಾರ ತಕರಾರು ಸಲ್ಲಿಸಲು 45 ದಿನ ಅವಕಾಶವಿದೆ. ನೀವು ಹೆಚ್ಚಿನ ಅವಧಿಯವರೆಗೆ ಇವಿಎಂಗಳನ್ನು ಇರಿಸಬೇಕಲ್ಲವೇ?

             ಮತ ಎಣಿಕೆ ಬಳಿಕ 45 ದಿನಗಳ ಒಳಗೆ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಲು ಅವಕಾಶ ಇರುತ್ತದೆ. ಯಾವುದಾರರೂ ತರಕಾರು ಅರ್ಜಿಗಳು ಬಂದಿವೆಯೇ ಎಂದು 46ನೇ ದಿನ ಮುಖ್ಯ ಚುನಾವಣಾ ಅಧಿಕಾರಿಯು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಅವರಿಗೆ ಪತ್ರ ಬರೆಯುತ್ತಾರೆ. ಯಾವುದೇ ಅರ್ಜಿ ಸಲ್ಲಿಕೆಯಾಗದಿದ್ದಲ್ಲಿ, ರಿಜಿಸ್ಟ್ರಾರ್‌ ಅವರು ಜಿಲ್ಲಾ ಚುನಾವಣಾ ಅಧಿಕಾರಿಗೆ ಪತ್ರ ಬರೆದು, ಸ್ಟ್ರಾಂಗ್‌ ರೂಮ್‌ ಅನ್ನು ತೆರೆಯಲು ಅನುಮತಿ ನೀಡುತ್ತಾರೆ. ಒಂದು ವೇಳೆ ಅರ್ಜಿ ಸಲ್ಲಿಕೆಯಾಗಿದ್ದರೆ, ಇವಿಎಂಗಳನ್ನು ಸೀಲ್‌ ಮಾಡಿ, ಲಾಕ್‌ ಮಾಡಿ ಇಡಲಾಗುತ್ತದೆ.

ಇವಿಎಂಗಳನ್ನು ಸಂರಕ್ಷಿಸಿ ಇಟ್ಟಿರುವಾಗಲೇ ಕಂಟ್ರೋಲ್‌ ಯೂನಿಟ್‌ ಹಾಗೂ ವಿವಿ-ಪ್ಯಾಟ್‌ಗಳನ್ನೂ ಸಂರಕ್ಷಿಸಿ ಇಡಲಾಗುತ್ತದೆಯೇ?

          ಕಂಟ್ರೋಲ್‌ ಯೂನಿಟ್‌ ಎನ್ನುವುದು ಮುಖ್ಯವಾಗಿರುವುದರಿಂದ, ಮೊದಲ ಹಂತ ಪರಿಶೀಲನೆಯ ವೇಳೆಯಲ್ಲಿ ಸೀಲ್‌ ಮಾಡಿ ಇಡಲಾಗುತ್ತದೆ. ಅಣಕು ಮತದಾನವಾದ ಬಳಿಕ ಮೂರೂ ಯಂತ್ರಗಳನ್ನು ಸೀಲ್‌ ಮಾಡಿ ಇಡಲಾಗುತ್ತದೆ. ಎರಡನೇ ಹಂತದ ಅಣಕು ಮತದಾನದ ಬಳಿಕ ಮೂರು ಯಂತ್ರಗಳನ್ನು ಸ್ಟ್ರಾಂಗ್ ರೂಮ್‌ನಲ್ಲಿ ಒಟ್ಟಿಗೆ ಇಡಲಾಗುತ್ತದೆ. ಮತದಾನ ನಡೆದ ಮೇಲೂ ಸೀಲ್‌ ಮಾಡಿಡಲಾಗುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries