ನವದೆಹಲಿ:ಯಾರಾದರೂ ಭವಿಷ್ಯ ಹೇಗಿರಲಿದೆ ಎಂದು ನೋಡಲು ಬಯಸಿದರೆ ಭಾರತ ದೇಶಕ್ಕೆ ಬರಬೇಕು ಎಂದ ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಭಾರತದಲ್ಲಿನ ಅಭಿವೃದ್ಧ ಪಯಣವು ಎಷ್ಟು ಮುಂದುವರೆದಿದೆ ಎಂಬುದರ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.
0
samarasasudhi
ಏಪ್ರಿಲ್ 11, 2024
ನವದೆಹಲಿ:ಯಾರಾದರೂ ಭವಿಷ್ಯ ಹೇಗಿರಲಿದೆ ಎಂದು ನೋಡಲು ಬಯಸಿದರೆ ಭಾರತ ದೇಶಕ್ಕೆ ಬರಬೇಕು ಎಂದ ಅಮೆರಿಕಾದ ರಾಯಭಾರಿ ಎರಿಕ್ ಗಾರ್ಸೆಟ್ಟಿ, ಭಾರತದಲ್ಲಿನ ಅಭಿವೃದ್ಧ ಪಯಣವು ಎಷ್ಟು ಮುಂದುವರೆದಿದೆ ಎಂಬುದರ ಬಗ್ಗೆ ಮೆಚ್ಚಿ ಮಾತನಾಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಎರಿಕ್ ಗಾರ್ಸೆಟ್ಟಿ, 'ನೀವು ಭವಿಷ್ಯ ನೋಡುವ ಆಸೆಯಿದೆಯೇ ಹಾಗಾದ್ರೆ ಭಾರತಕ್ಕೆ ಬನ್ನಿ, ನೀವು ಭವಿಷ್ಯವನ್ನು ಅನುಭವಿಸಲು ಬಯಸಿದರೆ ಭಾರತಕ್ಕೆ ಬನ್ನಿ, ನೀವು ಭವಿಷ್ಯದ ಮೇಲೆ ಕೆಲಸ ಮಾಡಲು ಬಯಸಿದರೆ, ಭಾರತಕ್ಕೆ ಬನ್ನಿ. ಪ್ರತಿಯೊಂದನ್ನು ಮಾಡಲು ಸಾಧ್ಯವಾಗುವ ದೊಡ್ಡ ಸವಲತ್ತು ನನಗೆ ಒದಗಿರುವುದು ನನಗೆ ಬಹಳ ಸಂತೋಷ ತಂದಿದೆ' ಎಂದರು.
ಯುಎಸ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಜೇಕ್ ಸುಲ್ಲಿವಾನ್ ಸಹ ಭಾರತದ ಬಗ್ಗೆ ಮೆಚ್ಚಿ ಮಾತನಾಡಿದ್ದು, ಭಾರತದೊಂದಿಗೆ ದೇಶದ ಬಾಂಧವ್ಯವನ್ನು ಶ್ಲಾಘಿಸುವಂತದ್ದು, ನಮ್ಮ ಪಾಲುದಾರಿಕೆಯು ಇದೀಗ ಹೊಸ ಎತ್ತರವನ್ನು ತಲುಪಿದೆ ಎಂದು ಹೇಳಿದರು.