HEALTH TIPS

ಮೌಂಟ್‌ ಎವರೆಸ್ಟ್‌ ಶಿಖರ ಏರಿದ ಭಾರತದ 16 ವರ್ಷದ ಬಾಲಕಿ ಕಾಮ್ಯಾ

 ಮ್ಶೆಡ್‌ಪುರ: ಕಾಮ್ಯಾ ಕಾರ್ತಿಕೇಯನ್‌ ಎನ್ನುವ 16 ವರ್ಷದ ಬಾಲಕಿ ನೇಪಾಳ ಭಾಗದಿಂದ ಮೌಂಟ್‌ ಎವರೆಸ್ಟ್‌ ಶಿಖರ ಏರುವ ಮೂಲಕ, ಈ ಸಾಧನೆ ಮಾಡಿದ ಅತಿ ಕಿರಿಯ ಭಾರತೀಯ ಎನಿಸಿಕೊಂಡಿದ್ದಾರೆ ಎಂದು ಟಾಟಾ ಸ್ಟೀಲ್‌ ಅಡ್ವೆಂಚರ್‌ ಫೌಂಡೇಶನ್‌ ಗುರುವಾರ ಹೇಳಿದೆ.

ಮಹಾರಾಷ್ಟ್ರ ಮೂಲದ ಕಾಮ್ಯಾ, ತಮ್ಮ ತಂದೆ ಭಾರತೀಯ ನೌಕಾಪಡೆಯ ಕಮಾಂಡರ್‌ ಎಸ್‌.

ಕಾರ್ತಿಕೇಯನ್‌ ಅವರ ಜೊತೆಗೂಡಿ ಶಿಖರವನ್ನು ಏರಿದ್ದಾರೆ. ತಂದೆ, ಮಗಳ ಜೋಡಿ ಮೇ 20 ರಂದು 8,848 ಮೀ. ಎತ್ತರಕ್ಕೆ ತಲುಪಿದ್ದಾರೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ಈ ಚಿಕ್ಕ ವಯಸ್ಸಿನಲ್ಲಿ ಮೌಂಟ್‌ ಎವರೆಸ್ಟ್‌ ಏರಿದ ಕಾಮ್ಯಾ ಅವರ ಸಾಧನೆಯನ್ನು ಶ್ಲಾಘಿಸುತ್ತೇವೆ. ಅವರ ಪ್ರಯಾಣವು ಪರಿಶ್ರಮ, ನಿಖರವಾದ ಸಿದ್ಧತೆ ಮತ್ತು ಅಚಲ ನಿರ್ಣಯದ ಮನೋಭಾವಕ್ಕೆ ಸಾಕ್ಷಿಯಾಗಿದೆ' ಎಂದು ಸಂಸ್ಥೆಯ ಅಧ್ಯಕ್ಷ ಚಾಣಕ್ಯ ಚೌಧರಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಾಮ್ಯ ಅವರು 2021ರಲ್ಲಿ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಶಕ್ತಿ ಪುರಸ್ಕಾರಕ್ಕೆ ಭಾಜನರಾಗಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries