HEALTH TIPS

ಕೊಚ್ಚಿ ಸ್ಮಾರ್ಟ್ ಸಿಟಿಯಲ್ಲಿ ಅವಘಡ: ಕಬ್ಬಿಣದ ಚೌಕಟ್ಟು ಕುಸಿದು ಓರ್ವ ಸಾವು: 5 ಮಂದಿಗೆ ಗಾಯ

                  ಕೊಚ್ಚಿ: ಕೊಚ್ಚಿ ಸ್ಮಾರ್ಟ್ ಸಿಟಿಯಲ್ಲಿ ನಿರ್ಮಾಣ ಕಾಮಗಾರಿ ವೇಳೆ ಅವಘಡ ಸಂಭವಿಸಿದೆ. ಪೇಂಟಿಂಗ್ ಮಾಡಲು ಅಳವಡಿಸಿದ್ದ ಕಬ್ಬಿಣದ ಚೌಕಟ್ಟು ಕುಸಿದು ಬಿದ್ದು ಓರ್ವ ಸಾವನ್ನಪ್ಪಿದ್ದಾನೆ.

               ಬಿಹಾರ ಮೂಲದ ಉತ್ತಮ್ ಮೃತ ಕಾರ್ಮಿಕ. ಐವರು ಅನ್ಯರಾಜ್ಯ ಕಾರ್ಮಿಕರು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಕೊಚ್ಚಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

               ಇಂದು ಬೆಳಗ್ಗೆ 8.30ರ ಸುಮಾರಿಗೆ ಅವಘಡ ಸಂಭವಿಸಿದೆ. ಕೊಚ್ಚಿ ಇನ್ಫೋ ಪಾರ್ಕ್‍ನಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ. ಎತ್ತರದ ಕಬ್ಬಿಣದ ಚೌಕಟ್ಟಿನ ಮೇಲೆ ಕೆಲಸ ಮಾಡುತ್ತಿದ್ದಾಗ ಅದು ಕುಸಿದು ಬಿದ್ದಿತು. ಅದರ ಮೇಲೆ ಕೆಲಸ ಮಾಡುತ್ತಿದ್ದವರು ಮತ್ತು ಕೆಳಗೆ ನಿಂತಿದ್ದವರು ಗಾಯಗೊಂಡಿದ್ದಾರೆ. ಕಬ್ಬಿಣದ ಚೌಕಟ್ಟಿನ ಪದರಗಳು ದೇಹದ ಮೇಲೆ ಬಿದ್ದಿದ್ದರಿಂದ ಹಲವರು ಗಾಯಗೊಂಡಿದ್ದಾರೆ.

             ಗಾಯಗೊಂಡವರೆಲ್ಲರೂ ಬಿಹಾರ ಮೂಲದವರು. ಅವಘಡÀಕ್ಕೀಡಾದ ಇಬ್ಬರನ್ನು ಅವರೊಂದಿಗಿದ್ದ ಕಾರ್ಮಿಕರು ರಕ್ಷಿಸಿದ್ದಾರೆ. ಕಬ್ಬಿಣದ ಚೌಕಟ್ಟುಗಳ ನಡುವೆ ಸಿಲುಕಿದ್ದ 3 ಜನರನ್ನು ಅಗ್ನಿಶಾಮಕ ದಳ ರಕ್ಷಿಸಿ ಆಸ್ಪತ್ರೆಗೆ ಸಾಗಿಸಲಾಯಿತು. ಹಲವರಿಗೆ ತಲೆ ಮತ್ತು ಕಾಲಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries