HEALTH TIPS

ಕಯ್ಯಾರರ 109ನೆ ಜನ್ಮ ದಿನಾಚರಣೆ: ಗಡಿನಾಡ ಕನ್ನಡಿಗರ ಹೋರಾಟದ ಸರದಾರನನ್ನು ನೆನೆಯುವುದು ಕರ್ತವ್ಯ:: ಸುಕುಮಾರ ಕುದ್ರೆಪ್ಪಾಡಿ

             ಬದಿಯಡ್ಕ: ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿ ಕಾಸರಗೋಡು ಮತ್ತು ಕಯ್ಯಾರರ ಕುಟುಂಬ ಜಂಟಿ ಆಶ್ರಯದಲ್ಲಿ ಕಯ್ಯಾರರ ಕವಿತಾ ಕುಟೀರ ಉಞ್ಞಕ್ಕ ನಿವಾಸದಲ್ಲಿ ಕಯ್ಯಾರರ 109ನೆ ಜನ್ಮ ದಿನಾಚರಣೆ ಶನಿವಾರ ನಡೆಯಿತು. ಸಮಾರಂಭವನ್ನು ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿಯ ಅಧ್ಯಕ್ಷ ಚನಿಯಪ್ಪ ನಾಯ್ಕ ದೀಪ ಬೆಳಗಿಸಿ ಪುಷ್ಪಾರ್ಚನೆಗೈದರು. 

              ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಸುಕುಮಾರ್ ಕುದ್ರೆಪ್ಪಾಡಿ ಅವರು, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈಯವರ ಬದುಕು ಹಾಗೂ ಬರಹ ಅನುಸ್ಮರಣೀಯ. ರಾಜಕೀಯ, ಸಾಮಾಜಿಕ, ಸಾಹಿತ್ಯ, ಶೈಕ್ಷಣಿಕ ಕ್ಷೇತ್ರದಲ್ಲಿ ಅವರು ತೋರಿದ ಅಸಾಮಾನ್ಯ ಸಾಧನೆ ಇಂದಿನ ಮಕ್ಕಳಿಗೆ, ಯುವಜನರಿಗೆ ಮಾದರಿಯಾಗಬೇಕು. ಕಯ್ಯಾರರ ಬಗ್ಗೆ, ಅವರ ರೀತಿ ನೀತಿಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಕನ್ನಡಿಗರು ಕನ್ನಡಕ್ಕಾಗಿ ಹೋರಾಡಿದ ಧೀಮಂತ ವ್ಯಕ್ತಿತ್ವವನ್ನು ಸದಾ ಸ್ಮರಿಸಬೇಕು. ಅವರು ತೋರಿದ ಹಾದಿಯಲ್ಲಿ ಮುನ್ನಡೆಯಬೇಕು ಎಂದು ತಿಳಿಸಿದರು. 

                 ಬದಿಯಡ್ಕ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಾಹಿನ್ ಕೇಳೋಟ್ ಮಾತನಾಡಿ, ಮುಚ್ಚಿರುವ ಕಯ್ಯಾರರ ಹೆಸರಲ್ಲಿರುವ ಬದಿಯಡ್ಕ ಪಂಚಾಯತಿ ಗ್ರಂಥಾಲಯವನ್ನು ತೆರೆದು, ಇನ್ನಷ್ಟು ಸುಸಜ್ಜಿತಗೊಳಿಸಿ ಅದರ ಪ್ರಯೋಜನ  ಓದುಗರಿಗೆ ಲಭ್ಯವಾಗುವಂತೆ ಮಾಡಬೇಕೆಂದು ಪಂಚಾಯತಿ ಅಧ್ಯಕ್ಷರನ್ನು ಒತ್ತಾಯಿಸುವುದಾಗಿ ಹೇಳಿದರು. 

           ನಿವೃತ್ತ ಪ್ರಾಂಶುಪಾಲ, ಸಂಘಟಕ ಪ್ರೊ.ಎ.. ಶ್ರೀನಾಥ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತಿ ಸದಸ್ಯ ಶ್ಯಾಂ ಪ್ರಸಾದ್ ಮಾನ್ಯ, ಕುಂಬ್ಡಾಜೆ ಗ್ರಾಮ ಪಂಚಾಯತಿ ಸದಸ್ಯ ಹರೀಶ್ ಗೋಸಾಡ, ತುಳು ಸಂಘಟಕ ಕೃಷ್ಣ ಡಿ ಬೆಳಿಂಜ, ನಿರಂಜನ್ ರೈ ಪೆರಡಾಲ, ಬದಿಯಡ್ಕ ರೋಟರಿ ಕ್ಲಬ್ ನ ಪ್ರತಿಕ್ ಆಳ್ವ,  ಕಯ್ಯಾರರ ಕುಟುಂಬದ ಪ್ರದೀಪ್ ರೈ, ಆರತಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಚಂದ್ರಹಾಸ ಮಾಸ್ತರ್, ವಸಂತ ಬಾರಡ್ಕ ಕಯ್ಯಾರರು ರಚಿಸಿದ ಕವನ ವಾಚಿಸಿದರು.  ಧನರಾಜ್ ಪೆರ್ಲ ಸ್ವಾಗತಿಸಿ, ಸುಷ್ಮಿತ ಗೋಸಾಡ ವಂದಿಸಿದರು. ಗಡಿನಾಡ ಸಾಹಿತ್ಯ ಸಾಂಸ್ಕøತಿಕ ಅಕಾಡಮಿಯ ಪ್ರಧಾನ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಕಾರ್ಯಕ್ರಮ ನಿರೂಪಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries