HEALTH TIPS

ಗುಜರಾತ್ | ಆಲೂಗಡ್ಡೆ ಚಿಪ್ಸ್‌ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆ

           ಜಾಮ್‌ನಗರ: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಐಸ್‌ಕ್ರೀಮ್‌ನಲ್ಲಿ ಮಾನವನ ಬೆರಳು ಪತ್ತೆಯಾಗಿರುವ ಸುದ್ದಿಯ ಬೆನ್ನಲ್ಲೇ ಇದೀಗ ಆಲೂಗಡ್ಡೆ ಚಿಪ್ಸ್‌ ಪ್ಯಾಕೆಟ್‌ನಲ್ಲಿ ಸತ್ತು ಕೊಳೆತ ಸ್ಥಿತಿಯಲ್ಲಿರುವ ಕಪ್ಪೆ ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

           ಜಾಮ್‌ನಗರದ ಪುಷ್ಕರ್ ಧಾಮ್ ಸೊಸೈಟಿಯ ನಿವಾಸಿ ಜಾಸ್ಮಿನ್ ಪಟೇಲ್ ಎಂಬುವವರ ನಾಲ್ಕು ವರ್ಷದ ಸೊಸೆ ಖರೀದಿಸಿ ತಂದಿದ್ದ 'ಕ್ರಂಚೆಕ್ಸ್' ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ.

ಮಾಹಿತಿ ಪಡೆದ ಆಹಾರ ಸುರಕ್ಷತಾ ಅಧಿಕಾರಿಗಳು ತನಿಖೆ ಕೈಗೆತ್ತಿಗೊಂಡಿದ್ದಾರೆ.

           'ಬಾಲಾಜಿ ವೇಫರ್ಸ್ ಕಂಪನಿಯ 'ಕ್ರಂಚೆಕ್ಸ್' ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ ಎಂದು ಜಾಸ್ಮಿನ್ ಪಟೇಲ್ ಎಂಬುವವರು ನಮಗೆ ದೂರು ನೀಡಿದ್ದರು. ಯಾವ ಅಂಗಡಿಯಿಂದ ಚಿಪ್ಸ್ ಖರೀದಿಸಲಾಗಿದೆಯೋ ಆ ಅಂಗಡಿಗೆ ನಿನ್ನೆ ರಾತ್ರಿಯೇ ಭೇಟಿ ನೀಡಿದ್ದೆವು. ಸತ್ತು ಕೊಳೆತ ಸ್ಥಿತಿಯಲ್ಲಿರುವ ಕಪ್ಪೆ ಪತ್ತೆಯಾಗಿರುವುದು ಪ್ರಾಥಮಿಕ ತನಿಖೆಯಿಂದ ಧೃಡಪಟ್ಟಿದೆ' ಎಂದು ಆಹಾರ ಸುರಕ್ಷತಾ ಅಧಿಕಾರಿ ಡಿ. ಬಿ. ಪರ್ಮಾರ್ ತಿಳಿಸಿದ್ದಾರೆ.


             ಪಾಲಿಕೆ ಆಯುಕ್ತರ ನಿರ್ದೇಶನದಂತೆ ತನಿಖೆ ನಡೆಸಲು ಪ್ಯಾಕೆಟ್‌ ಮೇಲಿರುವ ಪ್ರೊಡಕ್ಷನ್ ಬ್ಯಾಚ್‌ ಮಾದರಿಯನ್ನು ಸಂಗ್ರಹಿಸಿದ್ದೇವೆ' ಎಂದು ಹೇಳಿದ್ದಾರೆ.

                 ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಾಸ್ಮಿನ್ ಪಟೇಲ್, 'ನನ್ನ ಸೊಸೆ ಮತ್ತು ನನ್ನ ಒಂಭತ್ತು ತಿಂಗಳ ಮಗಳು ಚಿಪ್ಸ್‌ ತಿನ್ನುತ್ತಿದ್ದರು. ಈ ವೇಳೆ ನನ್ನ ಸೊಸೆ ಪ್ಯಾಕೆಟ್‌ ಅನ್ನು ದೂರ ಎಸೆದಿದ್ದು, ಸತ್ತ ಕಪ್ಪೆ ಇದೆ ಎಂದು ಹೇಳಿದ್ದಳು. ಮೊದಲು ಅವಳ ಮಾತನ್ನು ನಂಬದ ನಾನು ಪರಿಶೀಲಿಸಿದ ಮೇಲೆ ಆಘಾತಗೊಂಡೆ. ತಕ್ಷಣ ಕಸ್ಟಮರ್ ಕೇರ್ ನಂಬರ್‌ಗೆ ಕರೆ ಮಾಡಿದ್ದು, ಅಲ್ಲಿಂದ ಸಮಾಧಾನಕರ ಉತ್ತರ ಸಿಗಲಿಲ್ಲ. ಹಾಗಾಗಿ ಆಹಾರ ಸುರಕ್ಷತಾ ಅಧಿಕಾರಿಯನ್ನು ಸಂಪರ್ಕಿಸಿದೆ' ಎಂದು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries