ಕಾಸರಗೋಡು: ಕಾಸರಗೋಡು ನಗರದ ಬಿ.ಇ.ಎಂ.ಎಚ್.ಎಸ್ ಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಭಡ್ತಿ ಹೊಂದಿದ ಗಣೇಶ ಮಾಸ್ತರ್ ಅವರನ್ನು ಶಾಲಾ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಅಭಿನಂದಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಿ.ಎಚ್ ರವಿಶಂಕರ್ ವಹಿಸಿದ್ದರು. ಶಾಲಾ ಪ್ರಾಂಶುಪಾಲ ರಾಜೇಶ್ ಚಂದ್ರ ಕೆ ಪಿ, ಸಾರ್ವಜನಿಕ ಶಿಕ್ಷಣ ಸಂರಕ್ಷಣಾಯಜ್ಞದ ಅಧ್ಯಕ್ಷ ಕೆ.ಎನ್. ವೆಂಕಟರಮಣ ಹೊಳ್ಳ, ಮಾತೃ ಸಂಘದ ಅಧ್ಯಕ್ಷ ಹಾಗೂ ನಗರಸಭೆಯ ಸದಸ್ಯೆ ಶಾರದಾ ಬಿ, ಶಾಲಾ ಅಧ್ಯಾಪಕರಾದ ಬಾಲಕೃಷ್ಣ, ಯಶವಂತ. ವೈ ಮುಖ್ಯೋಪಾಧ್ಯಾಯರಿಗೆ ಶುಭ ಹಾರೈಸಿ, ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ರಕ್ಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ರಕ್ಷಕ-ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯ ಪ್ರೇಮ್ ಜಿತ್ ಸ್ವಾಗತಿಸಿ, ದಿನೇಶ್ ವಂದಿಸಿದರು.

.jpg)
