HEALTH TIPS

ಮಂಜೇಶ್ವರದಲ್ಲಿ ಆರೋಗ್ಯಾಧಿಕಾರಿ ಮೃತದೇಹ ಶೌಚಗೃಹದಲ್ಲಿ ಪತ್ತೆ

                ಮಂಜೇಶ್ವರ :   ಮಂಜೇಶ್ವರ ಬ್ಲಾಕ್ ಪಂಚಾಯಿತಿ ಕುಟುಂಬ ಆರೋಗ್ಯ ಕೇಂದ್ರದ ಅರೋಗ್ಯಾಧಿಕಾರಿ, ಪತ್ತನಂತಿಟ್ಟ ನಿವಾಸಿ ಮನೋಜ್ ಕೆ.ವಿ(45)ಅವರ ಮೃತದೇಹ ಆಸ್ಪತ್ರೆಯಿಂದ ಅನತಿ ದೂರದಲ್ಲಿರುವ ಬಾಡಿಗೆ ಕ್ವಾಟ್ರಸ್‍ನೊಳಗೆ ಶೌಚಗೃಹದಲ್ಲಿ ಪತ್ತೆಯಾಗಿದೆ.

                ಮಂಗಳವಾರ ಆಸ್ಪತ್ರೆಗೆ ಕರ್ತವ್ಯಕ್ಕೆ ಆಗಮಿಸದ ಹಿನ್ನೆಲೆಯಲ್ಲಿ ಮೊಬೈಲ್ ಕರೆಮಾಡಿದರೂ ಸ್ವೀಕರಿಸದರಿವುದರಿಂದ ಸಿಬ್ಬಂದಿ ಅವರ ಕೊಠಡಿಗೆ ತೆರಳಿ ನೋಡಿದಾಗ ಬಾಗಿಲು ಒಳಗಿಂದ ಚಿಲಕಹಾಕಿ ಭದ್ರಪಡಿಸಲಾಗಿದ್ದು, ದುರ್ವಾಸನೆ ಹರಡಿತ್ತು. ಸಿಬ್ಬಂದಿ ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕಾಗಮಿಸಿ ಬಾಗಿಲು ಒಡೆದು ನೋಡಿದಾಗ ಶೌಚಗೃಹದ ಬಳಿ ಮೃತದೇಹ ಕಂಡು ಬಂದಿತ್ತು. ಎರಡು ದಿವಸದ ಹಿಂದೆಯೇ ಸಾವು ಸಂಭವಿಸಿರಬೇಕೆಂದು ಸಂಶಯಿಸಲಾಗಿದೆ.  ಬದಿಯಡ್ಕದ ಕುಟುಂಬ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಇವರು, ನಂತರ ಮಂಜೇಶ್ವರಕ್ಕೆ ವರ್ಗಾವಣೆಗೊಂಡಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries