HEALTH TIPS

ಈ ಅನನ್ಯ ಸಾಧನೆಗೆ ಅಭಿನಂದನೆಗಳು: ಕೇಂದ್ರ ಸಚಿವ ಸುರೇಶ್ ಗೋಪಿ ಅವರನ್ನು ಅಭಿನಂದಿಸಿ ಶೋಭನಾ ಸಹಿತ ಮಾಲಿವುಡ್ ತಾರೆಯರು

                  ತ್ರಿಶೂರ್: ಮೋದಿ ಸರ್ಕಾರದ ಸಂಪುಟದಲ್ಲಿ ಕೇಂದ್ರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಸುರೇಶ್ ಗೋಪಿ ಅವರಿಗೆ ನಟಿ ಶೋಭನಾ ಅಭಿನಂದನೆ ಸಲ್ಲಿಸಿ ಕೇರಳ ರಾಜಕೀಯದಲ್ಲಿ ಹೊಸ ಬದಲಾವಣೆಯ ಶಕೆಗೆ ಶುಭಹಾರೈಸಿದ್ದಾರೆ. 

              ಶೋಭನಾ ಅವರು ಸುರೇಶ್ ಗೋಪಿ ಅವರೊಂದಿಗಿನ ಚಿತ್ರವನ್ನು ಎಫ್.ಬಿ. ಹಾಗೂ ಎಕ್ಸ್ ನಲ್ಲಿ  ಹಂಚಿಕೊಳ್ಳುವ ಮೂಲಕ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ನಿಮ್ಮ ವಿಶೇಷ ಸಾಧನೆಗಾಗಿ ಶೋಭನಾಳ ಹಾರೈಕೆಗಳು ಎಂದು ಅಭಿನಂದನೆ ಸಲ್ಲಿಸಿದ್ದಾರೆ.              

                  ಈ ಯಶಸ್ಸು ನಿಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವ ಮತ್ತು ಜನರ ಸೇವೆಗೆ ಅಚಲವಾದ ಸಮರ್ಪಣೆಗೆ ಸಾಕ್ಷಿಯಾಗಿದೆ. ನಿಮ್ಮ ನಾಯಕತ್ವದಲ್ಲಿ ಪ್ರಗತಿ ಮತ್ತು ಸಮೃದ್ಧಿಯ ಹೊಸ ಮಾರ್ಗಗಳು ಪ್ರಕಾಶಿಸಲ್ಪಡುತ್ತವೆ ಎಂದು ನನಗೆ ಖಾತ್ರಿಯಿದೆ. ಉತ್ತಮ ನಾಯಕತ್ವದ ಮೂಲಕ ಪ್ರಾಮಾಣಿಕ ಮತ್ತು ಸ್ಪೂರ್ತಿದಾಯಕ ಬದಲಾವಣೆಗಳನ್ನು ತರಲು ನಾವು ಬಯಸುತ್ತೇವೆ -ಎಂದು ಶೋಭನಾ  ಬರೆದಿದ್ದಾರೆ.

                    ರಾಷ್ಟ್ರಪತಿ ಭವನದಲ್ಲಿ ರಾತ್ರಿ 9 ಗಂಟೆಗೆ ನಡೆದ ಸಮಾರಂಭದಲ್ಲಿ ಸುರೇಶ್ ಗೋಪಿ ಪ್ರಮಾಣ ವಚನ ಸ್ವೀಕರಿಸಿದರು. ಯಾವ ಇಲಾಖೆಯನ್ನು ನಿರ್ವಹಿಸಲಾಗುತ್ತದೆ ಎಂಬ ವಿವರಗಳು ಇನ್ನಷ್ಟೇ ಹೊರಬರಲಿವೆ. ಸುರೇಶ್ ಗೋಪಿ ಅವರು ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ತ್ರಿಶೂರ್ ನಗರದಲ್ಲಿ ಅದ್ಧೂರಿ ಆಚರಣೆಗಳು ನಡೆಯಿತು.  ಸಿಹಿ ಹಂಚಿ, ಘೋಷಣೆ ಕೂಗುವ ಮೂಲಕ ಪೂರ್ಣನಗರಿ ಈ ಐತಿಹಾಸಿಕ ಕ್ಷಣವನ್ನು ಸ್ವಾಗತಿಸಿತು.

   ತಾರಾ ಗಣಗಳ ಅಭಿನಂದನೆ:

                 ಸುರೇಶ್ ಗೋಪಿಯವರಿಗೆ ಮಾಲಿವುಡ್ ಅತೀವ ಹರ್ಷ ವ್ಯಕ್ತಪಡಿಸಿದೆ. ತಾರೆಗಳಾದ ಮೋಹನ್ ಲಾಲ್, ಮಮ್ಮುಟ್ಟಿ, ಹರೀಶ್ ಪಿಶಾರಡಿ, ಉಣ್ಣಿ ಮುಕುಂದನ್, ಮೇಜರ್ ರವಿ ಮೊದಲಾದವರು ಅತೀವ ಸಂತಸ ವ್ಯಕ್ತಪಡಿಸಿ ಹಾರೈಸಿದರು. Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು


https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries