HEALTH TIPS

ಕಾಸರಗೋಡಿನ ‘ರಾ’ ಕಿರುಚಿತ್ರಕ್ಕೆ ಅಸಿಫ್ ಅವಾರ್ಡ್: ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಮೊದಲ ತುಳು ಚಿತ್ರ

              ಕುಂಬಳೆ: ಕೊಲ್ಕೊತ್ತಾದ ಅಮದೀರ್ ಇಂಟರ್ನೇಶನಲ್ ಶಾರ್ಟ್ ಫಿಲ್ಮ್ಸ್ ಪೇಸ್ಟಿವಲ್(ಅಸೀಫ್) ನಲ್ಲಿ ಕಾಸರಗೋಡಿನ ‘ಸುಖದ’ ಕ್ರಿಯೆಶನ್ಸ್ ನ ಕಣ್ಯಾರ ಪಿಲ್ಮ್ ನಿರ್ಮಿಸಿದ ‘ರಾ’ ತುಳು ಕಿರುಚಿತ್ರ ಅತ್ಯುತ್ತಮ ಸ್ಕ್ರೀನ್ ಪ್ಲೇ ಚಿತ್ರಕ್ಕಿರುವ ಬಹುಮಾನ ಗೆದ್ದುಕೊಂಡಿದೆ. 

             ಯುವ ನಿರ್ದೇಶಕ ಗೌತಮ್ ಶೆಟ್ಟಿ ಪುತ್ತಿಗೆ ನಿರ್ದೇಶಿಸಿರುವ ಈ ಕಿರುಚಿತ್ರ ಕಳೆದ ಫೆ.18 ರಂದು ನೀರ್ಚಾಲಲ್ಲಿ ಬಿಡುಗಡೆಗೊಂಡಿತ್ತು. ಶಿವರಾಜ್ ಕುಲಾಲ್, ರಕ್ಷಣ್, ಅಭಿಷೇಕ್, ಚಿತ್ತರಂಜನ್, ಅಶ್ವಥ್ ಸಹ ನಿರ್ದೇಶನ ನೀಡಿರುವ ಕಿರುಚಿತ್ರಕ್ಕೆ ಮನೀಶ್ ವಿದ್ಯಾಗಿರಿ ಸಂಗೀತ ನಿರ್ದೇಶನ ನೀಡಿದ್ದಾರೆ. ಅವಿನೇಶ್ ಶೆಟ್ಟಿ ಹಾಡಿರುವ ಚಿತ್ರಕ್ಕೆ ಶಿವರಾಜ್ ಕುಲಾಲ್ ಸಂಗೀತ ನೀಡಿದ್ದಾರೆ. ಗೌತಮ್ ಶೆಟ್ಟಿ, ಪೃಥ್ವಿನ್ ಕೃಷ್ಣ ಪುದುಕೋಳಿ, ಸಂದೀಪ್, ಹವ್ಯಾಸ್, ಪ್ರದೀಪ್, ಕಿರಣ್ ಕಲಾಂಜಲಿ ನಟಿಸಿದ್ದಾರೆ. ಶಿವದಾಸ್ ಕಾಮತ್ ಚಿತ್ರಸಂಪಾದನೆ ಮಾಡಿದ್ದು, ದೀಕ್ಷಿತ್ ಕಾಸರಗೋಡು ಸಹರಾರ ನೀಡಿದ್ದಾರೆ. 

              ಬುಧವಾರ ಕೊಲ್ಕತ್ತಾದ ರಬೀಂದ್ರ ಸರಣಿ ಗಣೇಶ ಟಾಕೀಸಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಯಿತು.  ಅಸೀಫ್ ನ ಪ್ರಮುಖರಾದ ಆಕಾಶ್ ಬ್ಯಾನರ್ಜಿ ಪ್ರಶಸ್ತಿಪತ್ರ, ಫಲಕಗಳನ್ನು ನಿರ್ದೇಶಕ ಗೌತಮ್ ಶೆಟ್ಟಿ ಪುತ್ತಿಗೆ ಹಾಗೂ ಮನೀಶ್ ವಿದ್ಯಾಗಿರಿ ಅವರಿಗೆ ನೀಡಿ ಗೌರವಿಸಿಸದರು. ಕಿರುಚಿತ್ರ ಉತ್ಸವದಲ್ಲಿ ಅಂತರಾಷ್ಟ್ರೀಯ ವಲಯದಿಂದ ಸಾವಿರದ ಮೂವತ್ತು ಚಿತ್ರಗಳು ಆಯ್ಕೆಗೆ ಬಂದಿದ್ದವು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries