HEALTH TIPS

ರಾಜಕೀಯ ನಿಮ್ಮ ಕ್ಷೇತ್ರವಲ್ಲ, ಅದರ ಮಾತು ಬೇಡ: ಶಂಕರಾಚಾರ್ಯರಿಗೆ ನಿರುಪಮ ಮನವಿ

          ಮುಂಬೈ: 'ರಾಜಕೀಯವು ಉತ್ತರಾಖಂಡದ ಜ್ಯೋತಿರ್‌ ಪೀಠದ ಶಂಕರಾಚಾರ್ಯ, ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರ ಕ್ಷೇತ್ರವಲ್ಲ. ಹೀಗಾಗಿ ಆ ಕುರಿತು ಅವರು ಪ್ರತಿಕ್ರಿಯಿಸದಿರುವುದೇ ಒಳ್ಳೆಯದು' ಎಂದು ಶಿವಸೇನಾ ಮುಖಂಡ ಸಂಜಯ ನಿರುಪಮ ಹೇಳಿದ್ದಾರೆ.

           ಶಿವಸೇನಾ (ಯುಬಿಟಿ) ಮುಖಂಡ ಉದ್ಧವ ಠಾಕ್ರೆ ಮನೆಗೆ ಸೋಮವಾರ ಭೇಟಿ ನೀಡಿದ್ದ ಸಂದರ್ಭದಲ್ಲಿ ಸ್ವಾಮೀಜಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, 'ನೀವು ನಮ್ಮ ಧಾರ್ಮಿಕ ಗುರುಗಳು.

              ಧರ್ಮ ಹಾಗೂ ಅಧ್ಯಾತ್ಮ ಕುರಿತು ನಮಗೆ ಮಾರ್ಗದರ್ಶನ ಮಾಡಿ. ಆದರೆ ರಾಜಕೀಯ ಕುರಿತ ಹೇಳಿಕೆಗಳನ್ನು ನೀಡಬೇಡಿ. ಅದು ನಿಮ್ಮ ಕ್ಷೇತ್ರವಲ್ಲ' ಎಂದಿದ್ದಾರೆ.

          'ಕಾಂಗ್ರೆಸ್ ಮತ್ತು ಅವಿಭಜಿತ ಎನ್‌ಸಿಪಿ ಜೊತೆ ಕೈಜೋಡಿಸಿದ್ದೇ ಉದ್ಧವ್ ಠಾಕ್ರೆ ಅವರು ಮಾಡಿದ ದ್ರೋಹ. ಒಂದೊಮ್ಮೆ ಇದು ದ್ರೋಹವಲ್ಲ ಎಂದಾದರೆ ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ಹೊಂದಲು ತೆಗೆದುಕೊಂಡ ಕ್ರಮ ಎಂದು ಹೇಳಬಹುದು' ಎಂದು ಉದ್ಧವ್ ವಿರುದ್ಧ ನಿರುಪಮ ವಾಗ್ದಾಳಿ ನಡೆಸಿದ್ದಾರೆ.

               ಇದಕ್ಕೆ ತಿರುಗೇಟು ನೀಡಿರುವ ಶಿವಸೇನಾ (ಯುಬಿಟಿ) ಪಕ್ಷದ ಮುಖಂಡ ಸಂಜಯ ರಾವುತ್, 'ಶಂಕರಾಚಾರ್ಯರ ಮಾತುಗಳಿಗೆ ಸಹಮತ ತೋರದವರು ಹಿಂದುತ್ವವನ್ನು ಒಪ್ಪಿಕೊಂಡಿಲ್ಲ ಎಂದರ್ಥ' ಎಂದಿದ್ದಾರೆ.

             'ಉದ್ಧವ್ ಠಾಕ್ರೆ ಅವರಿಗೆ ದ್ರೋಹವಾಗಿದೆ. ಇದಕ್ಕೆ ಜನರು ಆಕ್ರೋಶಗೊಂಡಿದ್ದಾರೆ. ಮತ್ತೊಮ್ಮೆ ಅವರು ಮಹಾರಾಷ್ಟ್ರದ ಮುಖ್ಯಮಂತ್ರಿಯನ್ನಾಗಿ ನೋಡದ ಹೊರತು ಜನರ ನೋವು ತಣಿಯದು' ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಹೇಳಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries