HEALTH TIPS

ಬಾಂಗ್ಲಾದೇಶೀಯರಿಗೆ ಕೋಪವಿಲ್ಲ, ನೋವಿದೆ: ಮಾಜಿ ಸಚಿವ ಅಬ್ದುಲ್ ಮೊಯೀನ್ ಖಾನ್

             ಢಾಕಾ: 'ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಲ್ಲಿ ಇರುವ ಕುರಿತು ಬಾಂಗ್ಲಾದೇಶೀಯರಿಗೆ ಕೋಪವಿಲ್ಲ, ನೋವಿದೆ' ಎಂದು ಮಾಜಿ ಕ್ಯಾಬಿನೆಟ್ ಸಚಿವ ಅಬ್ದುಲ್ ಮೊಯೀನ್ ಖಾನ್ ಹೇಳಿದ್ದಾರೆ.

              ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಖಾನ್ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತದಲ್ಲಿ ಹಸೀನಾ ಇರುವ ಕಾರಣ ಬಾಂಗ್ಲಾ-ಭಾರತದ ಸಂಬಂಧದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, 'ಅದು ಭಾರತದ ನಿರ್ಧಾರದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ' ಎಂದು ಹೇಳಿದರು.

                 'ನಮ್ಮ ದೇಶವು ಭಾರತದೊಂದಿಗೆ ಮೂರು ಕಡೆ ಗಡಿಯನ್ನು ಹಂಚಿಕೊಂಡಿದೆ ಮತ್ತು ಅದು ದೊಡ್ಡ ನೆರೆಯ ದೇಶವಾಗಿದೆ. ಆದ್ದರಿಂದ ಭಾರತವು ನಮ್ಮ ಉತ್ತಮ ಸ್ನೇಹಿತನಾಗದಿರಲು ಯಾವುದೇ ಕಾರಣವಿಲ್ಲ' ಎಂದರು.

               ಪ್ರಸ್ತುತ ಬಾಂಗ್ಲಾ ಪರಿಸ್ಥಿತಿಯು ಸುಧಾರಿಸುತ್ತಿದ್ದು, ಸಹಜ ಸ್ಥಿತಿಗೆ ಮರಳುತ್ತಿದೆ. ಮಧ್ಯಂತರ ಸರ್ಕಾರವು ದೇಶವನ್ನು ಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಖಾನ್ ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries