HEALTH TIPS

ಎಸ್ ವಿ ಹರ್ಷ ಮೆಲೋಡೀಸ್ ಹೊಸಂಗಡಿ ತಂಡದಿಂದ ಸಾಯಿ ನಿಕೇತನ ಸೇವಾಶ್ರಮ ದೈಗೋಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

               ಮಂಜೇಶ್ವರ: ಎಸ್ ವಿ ಹರ್ಷ ಮೆಲೋಡೀಸ್ ಹೊಸಂಗಡಿ ತಂಡದಿಂದ ವಿಶಿಷ್ಟ ರೀತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ದೈಗೋಳಿಯ ಸಾಯಿ ನಿಕೇತನ ಸೇವಾಶ್ರಮದ  ನಿರಾಶ್ರಿತರ ಜೊತೆ ಸತತ ಮೂರನೇ  ವರ್ಷ ಆಚರಿಸಲಾಯಿತು. ಕಾರ್ಯಕ್ರಮದಂಗವಾಗಿ ತಂಡದ ಗಾಯಕ ಗಾಯಕಿಯರಿಂದ ದೇಶಭಕ್ತಿ ಮೂಡಿಸುವ ಗೀತೆಗಳು ಹಾಗೂ ವಿವಿಧ ಮನೋರಂಜನಾ ಆಟ ನೃತ್ಯಗಳೊಂದಿಗೆ ನಡೆಸಲಾಯಿತು. 

               ಈ ಸಂದರ್ಭದಲ್ಲಿ ಸೇವಾಶ್ರಮದ ವ್ಯವಸ್ಥಾಪಕ ಡಾ.ಉದಯ್ ಕುಮಾರ್ ನೂಜಿ ಹಾಗೂ ಡಾ.ಶಾರದಾ ಉದಯ್ ಕುಮಾರ್  ಅವರು ತಂಡದ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಶಾಲು ಹೊದಿಸಿ ಅಭಿನಂದಿಸಿದರು. ಎಸ್ ವಿ ಹರ್ಷ ಮೆಲೋಡೀಸ್ ಹೊಸಂಗಡಿ ತಂಡದ ವ್ಯವಸ್ಥಾಪಕ ಪವನ್ ಹೊಸಂಗಡಿ, ಶೈಲು ಕುಂಪಲ, ಮಂಜುನಾಥ್ ಕೊಡ್ಲಮೊಗರು, ಮಂಜುನಾಥ್ ಸೊಂಕಾಲ್, ಶಿಲ್ಪ ಮಂಗಳೂರು, ನಾಗಿನಿ ಪವನ್ ಹೊಸಂಗಡಿ,ಸಬಿತಾ ಶೈಲು ಕುಂಪಲ, ತಂಡದ ಸಂಚಾಲಕ ಅಶೋಕ್ ಕೊಡ್ಲಮೊಗರು ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries