ನವದೆಹಲಿ: 'ಅನಪೇಕ್ಷಿತ ಹೇಳಿಕೆ'ಗಳಿಂದ ಅನಗತ್ಯವಾದ ತಿಕ್ಕಾಟ ಉಂಟಾಗಲಿದೆ. ಆದ್ದರಿಂದ ಸಂವಿಧಾನದ ಮೂರೂ ಅಂಗಗಳು ತಮ್ಮ ಸಾಂವಿಧಾನಿಕ ಕಾರ್ಯನಿರ್ವಹಣೆಯಲ್ಲಿ ಪರಸ್ಪರ ಗೌರವ ತೋರಬೇಕೆಂದು ನಿರೀಕ್ಷಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
0
samarasasudhi
ಸೆಪ್ಟೆಂಬರ್ 21, 2024
ನವದೆಹಲಿ: 'ಅನಪೇಕ್ಷಿತ ಹೇಳಿಕೆ'ಗಳಿಂದ ಅನಗತ್ಯವಾದ ತಿಕ್ಕಾಟ ಉಂಟಾಗಲಿದೆ. ಆದ್ದರಿಂದ ಸಂವಿಧಾನದ ಮೂರೂ ಅಂಗಗಳು ತಮ್ಮ ಸಾಂವಿಧಾನಿಕ ಕಾರ್ಯನಿರ್ವಹಣೆಯಲ್ಲಿ ಪರಸ್ಪರ ಗೌರವ ತೋರಬೇಕೆಂದು ನಿರೀಕ್ಷಿಸಲಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.
ತೀರ್ಪುಗಳ ಬಗ್ಗೆ ನ್ಯಾಯಯುತ ಟೀಕೆಗೆ ಯಾವಾಗಲೂ ಸ್ವಾಗತವಿರಲಿದೆ.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಭಾರತ್ ರಾಷ್ಟ್ರ ಸಮಿತಿಯ (ಬಿಆರ್‌ಎಸ್) ನಾಯಕಿ ಕೆ. ಕವಿತಾಗೆ ಜಾಮೀನು ಮಂಜೂರಾಗಿದ್ದಕ್ಕೆ, ತೆಲಂಗಾಣ ಮುಖ್ಯಮಂತ್ರಿ ಎ. ರೇವಂತ ರೆಡ್ಡಿ ನೀಡಿದ ಹೇಳಿಕೆಯು ನ್ಯಾಯಾಲಯದ ಗಮನಕ್ಕೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ರೆಡ್ಡಿ ಕ್ಷಮೆಯಾಚಿಸಿದ್ದಾರೆ ಎಂಬುದನ್ನೂ ಪರಿಗಣಿಸಿದ ನ್ಯಾಯಪೀಠವು, ಈ ವಿಷಯದಲ್ಲಿ ಮತ್ತಷ್ಟು ಮುಂದುವರಿಯಲು ಬಯಸುವುದಿಲ್ಲ ಎಂದು ಹೇಳಿದೆ.
'ನಾವು ಈ ವಿಷಯದಲ್ಲಿ ಮತ್ತಷ್ಟು ಮುಂದುವರಿಯಲು ಬಯಸದಿದ್ದರೂ, ತಮ್ಮ ಸಾಂವಿಧಾನಿಕ ಕರ್ತವ್ಯಗಳನ್ನು ನಿರ್ವಹಿಸಲು ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗವನ್ನು ಎಚ್ಚರಿಸಬಹುದು' ಎಂದು ಪೀಠ ಹೇಳಿದೆ.