HEALTH TIPS

ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿದ ಒಪ್ಪಂದವನ್ನು ಭಾರತ ಗೌರವಿಸಲಿ: ಪಾಕಿಸ್ತಾನ

 ಸ್ಲಾಮಾಬಾದ್: ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿದ ಒಪ್ಪಂದಕ್ಕೆ ಮಹತ್ವ ಇದೆ. ಭಾರತ ಕೂಡ ಒಪ್ಪಂದವನ್ನು ಗೌರವಿಸುತ್ತದೆ ಎಂಬ ವಿಶ್ವಾಸ ಹೊಂದಿರುವುದಾಗಿ ಪಾಕಿಸ್ತಾನ ಗುರುವಾರ ಹೇಳಿದೆ.

ಒಪ್ಪಂದ ಮರುಪರಿಶೀಲನೆ ಕುರಿತು ಭಾರತ ನೋಟಿಸ್‌ ನೀಡಿದ್ದಕ್ಕೆ ಪಾಕಿಸ್ತಾನ ಈ ಪ್ರತಿಕ್ರಿಯೆ ನೀಡಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿದೇಶಾಂಗ ಸಚಿವಾಲಯ ವಕ್ತಾರೆ ಮುಮ್ತಾಜ್‌ ಜಹ್ರಾ ಬಲೂಚ್‌, 'ಸಿಂಧು ನದಿ ನೀರು ಹಂಚಿಕೆಗೆ ಸಂಬಂಧಿಸಿ ಎರಡೂ ದೇಶಗಳು ನಿರ್ದಿಷ್ಟ ವಿಧಾನ ಅನುಸರಿಸುತ್ತಿವೆ. ನೀರು ಹಂಚಿಕೆ ಕುರಿತ ಯಾವುದೇ ವಿಚಾರಗಳನ್ನು ಒಪ್ಪಂದದಲ್ಲಿನ ಅವಕಾಶಗಳ ಪ್ರಕಾರವೇ ಬಗೆಹರಿಸಿಕೊಳ್ಳಬೇಕು' ಎಂದರು.

'ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ಗಮನಿಸಿದರೆ, ಒಪ್ಪಂದದ ಮರುಪರಿಶೀಲನೆಗೆ ಪಾಕಿಸ್ತಾನಕ್ಕೆ ಆಸಕ್ತಿ ಇಲ್ಲ ಎಂಬುದು ಗೊತ್ತಾಗುತ್ತದೆ' ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries